ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಮೊದಲ RRTS ರೈಲಿನ ರಾತ್ರಿ ಸಂಚಾರ ಯಶಸ್ವಿ

ದೆಹಲಿ : ಭಾರತದ ಮೊದಲ ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (RRTS ) ರೈಲು ತನ್ನ ರಾತ್ರಿ ಪ್ರಾಯೋಗಿಕ ಸಂಚಾರ ನಡೆಸಿದ್ದು,ದೆಹಲಿ-ಗಾಝಿಯಾಬಾದ್ ಮಧ್ಯೆ ಸಂಚಾರ ನಡೆಸಿ ಯಶಸ್ವಿಯಾಗಿದೆ. ಸದ್ಯ ರಾಪಿಡ್ ರೈಲಿನ ಆಗಮನಕ್ಕಾಗಿ ಪ್ರಯಾಣಿಕರು ಕಾತರರಾಗಿದ್ದಾರೆ.

ಹೈ-ಸ್ಪೀಡ್ ಮತ್ತು ಹೈ-ಫ್ರೀಕ್ವೆನ್ಸಿ ಈ ಪ್ರಾದೇಶಿಕ ಪ್ರಯಾಣಿಕರ ಸಾರಿಗೆ ವ್ಯವಸ್ಥೆಯ ವಿಶೇಷ. NCRTC ಇದನ್ನು ನಿರ್ಮಿಸುತ್ತಿದೆ. ದೆಹಲಿ ಮತ್ತು ಮೀರತ್, ಸರೈ ಕಾಲೇ ಖಾನ್-ಘಾಜಿಯಾಬಾದ್-ಮೀರತ್ RRTS ಕಾರಿಡಾರ್ ಮೂಲಕ ಸಂಪರ್ಕಿಸುತ್ತದೆ.ಅಲ್ ಸ್ಟೋಮ್ನಿಂದ ತಯಾರಿಸಲ್ಪಟ್ಟ ಈ ರೈಲನ್ನು, ಗುಜರಾತ್ನ ಸಾವ್ಲಿಯಿಂದ ಜೂನ್ 3 ರಂದು ಕಳುಹಿಸಲಾಗಿತ್ತು. 10 ದಿನಗಳ ಪ್ರಯಾಣದ ಬಳಿಕ ಇದು ರಾಜಧಾನಿ ದೆಹಲಿ ತಲುಪಿದೆ.

ರಾಪಿಡ್ ರೈಲಿನ ಸಂಚಾರಕ್ಕಾಗಿ ಈಗಾಗ್ಲೇ ಹಳಿಗಳನ್ನು ಹಾಕಲಾಗಿದೆ. ಡಿಪೋದಲ್ಲಿ ರೈಲಿನ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಆಡಳಿತ ಕಟ್ಟಡವನ್ನು ಸಹ ನಿರ್ಮಿಸಲಾಗಿದೆ.

Edited By : Nirmala Aralikatti
PublicNext

PublicNext

14/08/2022 09:43 am

Cinque Terre

100.34 K

Cinque Terre

1

ಸಂಬಂಧಿತ ಸುದ್ದಿ