ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಅಂತ್ಯಸಂಸ್ಕಾರಕ್ಕೆ ಸಿಗದ ಜಾಗ: ಗ್ರಾಮಸ್ಥರಿಂದ ಶವವಿಟ್ಟು ಪ್ರತಿಭಟನೆ

ದಾವಣಗೆರೆ: ಹೊನ್ನಾಳಿ ತಾಲೂಕಿನ ಚಿಕ್ಕಾಲಿವಾಣ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ಅಂತ್ಯಸಂಸ್ಕಾರ ಮಾಡಲು ರುದ್ರಭೂಮಿ ಇಲ್ಲ.‌ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ವ್ಯಕ್ತಿ ಸತ್ತಿದ್ದು, ಹೂಳಲು ಜಾಗ ಇರದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೊಲೀಸರು, ಹೊನ್ನಾಳಿ ತಹಶೀಲ್ದಾರ್ ರಶ್ಮಿ ಜೊತೆ ಗ್ರಾಮಸ್ಥರು ವಾಗ್ವಾದ ನಡೆಸಿದರು. ಶವಸಂಸ್ಕಾರ ಮಾಡಲು ಜಾಗ ನೀಡಬೇಕು ಎಂದು ಪಟ್ಟು ಹಿಡಿದರು. ಅಧಿಕಾರಿಗಳು ಸ್ಪಂದಿಸದ ಕಾರಣ ಅಲ್ಲಿಯೇ ಪ್ರತಿಭಟನೆ ಮುಂದುವರಿಸಿದರು.

Edited By : Shivu K
PublicNext

PublicNext

01/08/2022 08:00 pm

Cinque Terre

26.79 K

Cinque Terre

0

ಸಂಬಂಧಿತ ಸುದ್ದಿ