ಗದಗ: ಜಿಲ್ಲೆಯ ಮುಂಡರಗಿಯ ಹೊರವಲಯದ ಹೆಸರೂರು ರಸ್ತೆ ಬಳಿ ನಿರ್ಮಾಣವಾಗಿರುವ ಕೆಎಚ್ ಬಿ ಕಾಲೋನಿಯ ಸೈಟ್ ಹಂಚಿಕೆಯಲ್ಲಿ ವ್ಯತ್ಯಾಸ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
2017ರಲ್ಲಿ ಸುಮಾರು 42 ಎರಕೆಯಲ್ಲಿ ಸೈಟ್‌ಗಳನ್ನು ಡೆವಲಪ್ಮೆಂಟ್ ಮಾಡಲಾಗಿದೆ. ಜನರಿಗೆ ಸರಿಯಾಗಿ ಮಾಹಿತಿ ನೀಡದೆ ಸೈಟ್ ಖರೀದಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದಾಗಿ ಎಸ್‌ಸಿ, ಎಸ್‌ಟಿ, ದಿನಗೂಲಿ ಕಾರ್ಮಿಕರು ಸೇರಿದಂತೆ ಆರ್ಥಿಕ ಹಿಂದುಳಿದ ವರ್ಗಕ್ಕೆ ಸರಿಯಾಗಿ ಮಾಹಿತಿ ಸಿಕ್ಕಿಲ್ಲ. ಆದರೂ ಲಾಟರಿ ಮೂಲಕ ಸೈಟ್ ನಂಬರ್ ಹಂಚಿಕೆಗೆ ಮಂಡಳಿ ಮುಂದಾಗಿದೆ. ಹೀಗಾಗಿ ಲಾಟರಿ ಪ್ರಕ್ರಿಯೆ ಸ್ಥಗಿತಗೊಳಿಸಿ ಮತ್ತೊಮ್ಮೆ ಅರ್ಜಿ ಕರೆಯಬೇಕು ಅಂತ ಜನ ಆಗ್ರಹಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಚ್ ಬಿ ಅಧಿಕಾರಿಗಳು, ಸೈಟ್‌ಗಳು ಇನ್ನೂ ಹಂಚಿಕೆಯಾಗಿಲ್ಲ. ಸದ್ಯ ಲಾಟರಿ ಮೂಲಕ ಸೈಟ್ ನಂಬರ್‌ಗಳನ್ನ ಹಂಚಲಾಗುವುದು. 2017ರಲ್ಲಿ ಕಾನೂನು ರೀತಿಯಲ್ಲೇ ಅರ್ಜಿ ಆಹ್ವಾನಿಸಲಾಗಿದೆ. ಅದರಂತೆಯೇ ಲಾಟರಿ ಮೂಲಕ ಸೈಟ್ ನಂಬರ್ ಹಂಚಲಾಗುತ್ತದೆ ಎಂದು ತಿಳಿಸಿದ್ದಾರೆ.
PublicNext
26/07/2022 09:57 pm