ಹಾವೇರಿ : ಇದೇನು ಅಂಗನವಾಡಿ ಕೇಂದ್ರವೂ ಅಥವಾ ದನದ ಕೊಟ್ಟಿಗೆಯೋ ತಿಳಿಯದಂತ್ತಾಗಿದೆ. ಹೌದು ಹಾವೇರಿ ನಗರದ ವಿಜಯನಗರದ ಬಡಾವಣೆಯಲ್ಲಿ ಅಂಗನವಾಡಿ ಕೇಂದ್ರ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಮಳೆಗಾಲ ಬಂತು ಅಂದ್ರೆ ಸಾಕು ಅಂಗನವಾಡಿಗೆ ಸುತ್ತಮುತ್ತಲಿನ ವಾತಾವರಣ ಕೊಳಚೆ ಪ್ರದೇಶವಾಗಿ ಬಿಡುತ್ತದೆ.
ಈ ಕೊಳಚೆ ಪ್ರದೇಶದಲ್ಲಿಯೇ ಪುಟ್ಟ ಪುಟ್ಟ ಮಕ್ಕಳು ನಿತ್ಯ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಇನ್ನು ಈ ಅಂಗನವಾಡಿಯ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಂಡು ಕಾಣದಂತೆ ಸುಮ್ಮನಿದ್ದಾರೆ.
ಸುತ್ತಲೂ ನೀರು ತುಂಬಿಕೊಂಡಿದೆ ಮಧ್ಯೆ ಅಂಗನವಾಡಿ ಕೇಂದ್ರವಿದೆ ಸತತವಾಗಿ ನೀರು ನಿಂತು ಸೊಳ್ಳೆ ಹಂದಿಗಳ ಕಾಟ ಹೆಚ್ಚಾಗುತ್ತಿದೆ ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಶೀಘ್ರ ಸಂಬಂಧಪಟ್ಟ ಅಕಾರಿಗಳು ತುಸು ಗಮನಹರಿಸಬೇಕಿದೆ.
ವರದಿ- ಈರನಗೌಡ ಪಾಟೀಲ
PublicNext
23/07/2022 12:12 pm