ಕೊರಟಗೆರೆ : ಜುಲೈ 11 ರಂದು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆ ನಡೆಸಲು ಅಂತರ್ಜಲ ಮತ್ತು ನದಿನೀರು ಅಭಿವೃದ್ಧಿ ಸಂವಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಜಯಮಂಗಲಿ, ಗರುಡಾಚಲ, ಸುವರ್ಣಮುಖಿ ಶಾಶ್ವತ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ 10:30 ಕ್ಕೆ ಸಂವಾದ ಆಯೋಜಿಸಿದೆ. ಐಎಎಸ್ ಅಧಿಕಾರಿ ಬಿ.ಹೆಚ್. ಅನಿಲ್ ಕುಮಾರ್ ಅಭಿಮಾನಿಗಳ ಬಳಗ ಸಂವಾದದ ನೇತೃತ್ವವನ್ನು ವಹಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
PublicNext
11/07/2022 08:21 am