ಮಧ್ಯಪ್ರದೇಶ: ಜಗತ್ತು ಎಷ್ಟೇ ಮುಂದುವರೆದಿದ್ದರು ಇನ್ನು ಕೆಲವು ಕಡೆ ಕುಡಿಯುವ ನೀರಿನ ಹಾಹಾಕಾರ ತಪ್ಪಿಲ್ಲ. ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಕಿಲೋಮೀಟರ್ ಗಟ್ಟಲೇ ದೂರ ಅಲೆದಾಡಿ ನೀರು ತರುವ ಪರಿಸ್ಥಿತಿ ಇದೆ. ಹೌದು ಒಂದು ಬಕೆಟ್ ನೀರಿಗಾಗಿ ಘುಸಿಯಾ ಗ್ರಾಮದ ಜನರು ಬಾವಿಗಳು ಮತ್ತು ಕೊಳಗಳಿಗೆ ಇಳಿದು ಕೊಂಡೊಯ್ಯುವ ಪರಿಸ್ಥಿತಿ ಇದೆ.
ವಿಡಿಯೋದಲ್ಲಿ ಸಣ್ಣ ಬಾಲಕಿ, ಪುರುಷ ಹಾಗೂ ಮಹಿಳೆಯೊಬ್ಬಳು ಬಾವಿಗೆ ಇಳಿದು ನೀರು ತುಂಬಿಸಿ ಮೇಲೆ ಕೊಂಡೊಯ್ಯುವ ದೃಶ್ಯಾವಳಿಯನ್ನು ಕಾಣಬಹುದು.
ಮಹಿಳೆಯು ಯಾವುದೇ ಹಗ್ಗದ ಸಹಾಯ ವಿಲ್ಲದೆ ಏಣಿಯಲ್ಲಿ ಹತ್ತಿದಂತೆ ಬಾವಿಗೆ ಅಳವಿಡಿಸಿದ ಹಿಡಿಯುವಿಕೆಯನ್ನು ಹಿಡಿದು ಹತ್ತುತ್ತಾರೆ. ಕೊಂಚ ಕೈ ತಪ್ಪಿದರೂ ಸಾಕು ಜೀವ ಹೋಗುವುದು ಖಚಿತ. ಈ ವಿಡಿಯೋವನ್ನು ನೋಡಿದಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದಲ್ಲಿನ ನೀರನ ಅಭಾವ ಎಷ್ಟಿದೆ ಎಂಬುದನ್ನು ತೋರಿಸಿಕೊಡುತ್ತದೆ. ಘುಸಿಯಾ ಭಾಗದ ಜನರ ಇಂಥ ಕಷ್ಟದ ಪರಿಸ್ಥಿತಿಯನ್ನು ಕೇಳುವವರು ಇಲ್ಲದಾಗಿದೆ.
ರಾಜ್ಯ ಸರಕಾರ 2024ರ ವೇಳೆಗೆ ಪ್ರತಿ ಗ್ರಾಮಕ್ಕೂ ನಲ್ಲಿ ನೀರು ಪೂರೈಸುವುದಾಗಿ ಭರವಸೆ ನೀಡಿದೆ. ಆದರೆ ಇನ್ನೂ ಲಕ್ಷಾಂತರ ಜನರಿಗೆ ಕುಡಿಯುವ ನೀರು ಸಿಗದಂತಾಗಿದೆ. ಘುಸಿಯಾದಲ್ಲಿ, ಕೋಪಗೊಂಡ ಗ್ರಾಮಸ್ಥರು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಈ ವರ್ಷ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.
PublicNext
03/06/2022 10:15 pm