ಈಗಾಗಲೇ ಇಂಧನ ಬೆಲೆ ಏರಿಕೆ ಸಿಲಿಂಡರ್ ಬೆಲೆ ಏರಿಕೆ ಸಾಲು ಸಾಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಗೆಟ್ಟಿರುವ ಜನರಿಗೆ ಮತ್ತೋಂದು ದಿನ ಬಳಕೆಯ ಆಹಾರ ಪದಾರ್ಥದ ಬೆಲೆ ಶಾಕ್ ನೀಡಿದೆ.
ಹೌದು ! ವಿವಿಧೆಡೆ ಬೀಸುತ್ತಿರುವ ಚಂಡಮಾರುತದ ಪರಿಣಾಮ ಹಾಗೂ ಎಲ್ಲೇಡೆ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಲ್ಲಿ ಬೆಳೆದ ರೈತರ ಟೊಮೆಟೊ ಬೆಳೆ ಹಾಳಾಗಿದ್ದು ಸದ್ಯ ಮಾರುಕಟ್ಟೆಗೆ ಆಮದಾಗುತ್ತಿರುವ ಅತಿ ಕಡಿಮೆ ಟೊಮೆಟೊ ಕೆಜಿಗೆ 100ಬೆಲೆ ಏರಿಕೆ ಕಂಡಿದೆ.
ಇನ್ನೂ ವಿವಿಧೆಡೆ ಆಲಿಕಲ್ಲು ಮಳೆ ಬೀಳುತ್ತಿದ್ದು, ಕೆಲೆವೆಡೆ ಟೊಮೆಟೊ ಬೆಳೆ ಹಾಳಾಗಿದೆ. ಈ ಕಾರಣದಿಂದ ಅತಿ ಕಡಿಮೆ ಟೊಮೆಟೊ ಮಾರುಕಟ್ಟೆಗೆ ಆಮದಾಗುತ್ತಿದೆ ಎಂಬ ಅಂಶ ತಿಳಿದು ಬಂದಿದೆ.
ಮುಖ್ಯ ತರಕಾರಿ ಅದರಲ್ಲೂ ನಿತ್ಯ ಆಹಾರಕ್ಕೆ ಬೇಕಾಗುವ ಟೊಮೆಟೊ ಬೆಲೆ ಏರುತ್ತಿರುವ ಪರಿಣಾಮ ಶ್ರೀಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ, ಇನ್ನೂ ನಿತ್ಯ ದುಡಿದು ಬಂದ ಕೂಲಿಯಲ್ಲೇ ಜೀವನ ಸಾಗಿಸುವವರ ಬದುಕು ಮತ್ತಷ್ಟು ಸಮಸ್ಯೆಗೆ ಸಿಲುಕಿದೆ.
PublicNext
17/05/2022 03:26 pm