ಬೆಂಗಳೂರು: ರಾಜ್ಯದ ರಾಜಧಾನಿಯ ರಸ್ತೆಗಳೆಲ್ಲ ಗುಂಡಿಮಯವಾಗಿಯೇ ಇವೆ. ಇವುಗಳನ್ನ ತಿಳಿಯಲು ಬಿಬಿಎಂಪಿ ಈಗ ಆ್ಯ ಮೊರೆ ಹೋಗಿದೆ. ಈ ಆ್ಯನಲ್ಲಿ ಯಾವ ರಸ್ತೆಯಲ್ಲಿ ಎಷ್ಟು ಪಾಟ್ ಹೋಲ್‌ಗಳಿವೆ. ಅವುಗಳಲ್ಲಿ ಎಷ್ಟು ಮುಚ್ಚಲಾಗಿದೆ ಅನ್ನೋ ಮಾಹಿತಿ ದೊರೆಯುತ್ತದೆ. ಬನ್ನಿ, ಹೇಳ್ತಿವಿ ಇತರ ಡೀಟೇಲ್ಸ್.
ಬೆಂಗಳೂರಿನ ರಸ್ತೆಗಳಲ್ಲಿ ಇಲ್ಲಿವರೆಗೂ ಒಟ್ಟು 9,207 ಗುಂಡಿಗಳು ಸಮೀಕ್ಷೆಯಲ್ಲಿ ಪತ್ತೆಯಾಗಿದ್ದು,ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್ ಮೂಲಕವೇ ಬಿಬಿಎಂಪಿ ಈಗ ಸರ್ವೆ ಮಾಡಿಸಿದೆ. ಈಗಾಗಲೇ ಐದು ವಿಧಾನ ಸಭಾ ಕ್ಷೇತ್ರದಲ್ಲಿರೋ ಗುಂಡಿಗಳನ್ನ ಮುಚ್ಚಲು ಕಾರ್ಯದೇಶ ನೀಡಲಾಗಿದೆ.ಬಾಕಿ ಇರೋ 22 ಕಡೆಗೆ ಪಾಲಿಕೇನೆ ಗುಂಡಿ ಮುಚ್ಚಲಿದೆ.
ವಿಶೇಷವೆಂದ್ರೆ, ಈ ಆ್ಯಪ್ ಮೂಲಕ ಸಾರ್ವಜನಿಕರು ದೂರು ಕೂಡ ಸಲ್ಲಿಸಬಹುದಾಗಿದ್ದು,ಮಳೆಗಾಲ ಕಳೆದ ಮೇಲೆ ಗುಂಡಿ ಮುಚ್ಚುವ ಕೆಲಸವನ್ನ ಮಾಡ್ತೀವಿ ಅಂತಲೂ ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.
PublicNext
17/05/2022 07:55 am