ಬೆಂಗಳೂರು: ಉಕ್ರೇನ್ ಮತ್ತು ರಷ್ಯಾ ಯುದ್ಧ ಇನ್ನೂ ನಿಂತಿಲ್ಲ. ಇದರಿಂದ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ "ವಂದೇ ಭಾರತ್" ರೈಲು ತಯಾರಿಕೆಯಲ್ಲಿ ವಿಳಂಬ ಆಗುತ್ತಿದೆ. ಈ ಕಾರಣಕ್ಕೇನೇ ಸರಿಯಾದ ಸಮಯದಕ್ಕೆ ಇದನ್ನ ಪೂರ್ಣಗೊಳಿಸಲು ಭಾರತೀಯ ರೈಲ್ವೆ ಹೊಸ ಯೋಜನೆಯೊಂದನ್ನ ಪ್ಲಾನ್ ಮಾಡಿದೆ.
ಹೌದು. ಈ ರೈಲುಗೆ ಬೇಕಾಗೋ ಗಾಲಿಯನ್ನ ಬೆಂಗಳೂರಿನಲ್ಲಿಯೇ ತಯಾರಿಸೋಕೆ ಪ್ಲಾನ್ ಮಾಡಿದೆ. ಇಲ್ಲಿಯ ಕಾರ್ಖಾನೆಗಳಲ್ಲಿಯೇ ವಂದೇ ಭಾರತ್ ರೈಲಿನ ಗಾಲಿಗಳು ತಯಾರ್ ಆಗುತ್ತವೆ.
ಈ ಗಾಲಿಗಳನ್ನ ಈ ಮೊದಲು ಉಕ್ರೇನ್ ದೇಶದಿಂದಲೇ ಆಮದು ಮಾಡಿಕೊಳ್ಳಲು ಪ್ಲಾನ್ ಮಾಡಲಾಗಿತ್ತು. ಆದರೆ,ಅಲ್ಲಿ ಯುದ್ಧ ನಡೀತಾನೇ ಇರೋದ್ರಿಂದ ಬೆಂಗಳೂರಿನ ಕಾರ್ಖಾನೆಯಲ್ಲಿಯೇ ವಂದೇ ಭಾರತ್ ರೈಲಿನ ಗಾಲಿಗಳನ್ನ ತಯಾರಿಸೋಕೆ ಭಾರತೀಯ ರೈಲ್ವೆ ನಿರ್ಧರಿಸಿದೆ.
PublicNext
07/05/2022 07:52 am