ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲು ಪ್ರಯಾಣಿಕರಿಗೆ ಹಾಸಿಗೆ, ಸುರಳಿ ವಿತರಣೆ ಆರಂಭ

ಬೆಂಗಳೂರು: ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಹಂತಹಂತವಾಗಿ ಪ್ರಯಾಣಿಕರಿಗೆ ಹೊದಿಕೆ ಮತ್ತು ಹಾಸಿಗೆ ಸುರಳಿಗಳ ಪೂರೈಕೆಯನ್ನ ಪುನರಾರಂಭಿಸುತ್ತಿದೆ. ಮೊದಲ ಹಂತದಲ್ಲಿ, ರೈಲು ಸಂಖ್ಯೆ 12658 ಕೆಎಸ್‌ಆರ್ ಬೆಂಗಳೂರು-ಚೆನ್ನೈ ಮೇಲ್‌ನಲ್ಲಿ ನಿನ್ನೆ ಪ್ರಯಾಣಿಕರಿಗೆ ಹಾಸಿಗೆ ಸುರಳಿಗಳನ್ನು ನೀಡಲಾಯಿತು. 20.04.2022 ರಿಂದ ರೈಲು ಸಂಖ್ಯೆ 12627 ಕೆಎಸ್‌ಆರ್ ಬೆಂಗಳೂರು–ನವದೆಹಲಿ ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಹಾಸಿಗೆ ಸುರಳಿಗಳ ಒದಗಿಸುವಿಕೆ ಪುನರಾರಂಭಿಸಲಾಗುವುದು.

ಎರಡನೇ ಹಂತದಲ್ಲಿ, ಕೆಎಸ್‌ಆರ್ ಬೆಂಗಳೂರು–ಹಜರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಶೀಘ್ರದಲ್ಲೇ ಸೇವೆಗಳನ್ನು ಪ್ರಾರಂಭಿಸಲಾಗುವುದು. ಮೂರನೇ ಹಂತದಲ್ಲಿ, ಹೊದಿಕೆ ಮತ್ತು ಹಾಸಿಗೆ ಸುರಳಿಗಳ ಒದಗಿಸುವಿಕೆ ಗುತ್ತಿಗೆ ನೀಡಿದ ನಂತರ 01.07.2022 ರಿಂದ ಇತರ ರೈಲುಗಳಲ್ಲಿ ಸರಬರಾಜು ಮಾಡುವ ನಿರೀಕ್ಷೆಯಿದೆ. ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಈ ಸೇವೆಗಳನ್ನ ಕೆಲಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Edited By : Nagaraj Tulugeri
PublicNext

PublicNext

20/04/2022 08:05 am

Cinque Terre

82.81 K

Cinque Terre

2

ಸಂಬಂಧಿತ ಸುದ್ದಿ