ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಇಂಡಿಗೊ ವಿಮಾನ ಹಾರಾಟ

ದೇವನಹಳ್ಳಿ: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಮಾನಯಾನ ಕ್ವಂಟಾಸ್ ಸಂಸ್ಥೆ ಬೆಂಗಳೂರಿನಿಂದ ಸಿಡ್ನಿಗೆ ತಡೆರಹಿತ ವಿಮಾನಗಳ ಹಾರಾಟ ನಡೆಸಿದೆ. ಇಂಡಿಗೊ ವಿಮಾನಯಾನ ಸಂಸ್ಥೆ ಭಾರತ & ಆಸ್ಟ್ರೇಲಿಯಾ ನಡುವೆ ಪ್ರಯಾಣ ಸುಲಭಗೊಳಿಸಲಿದೆ. ಸೆಪ್ಟೆಂಬರ್ 14, 2022ರಿಂದ ಕ್ವಂಟಾಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ & ಸಿಡ್ನಿಯ ಕಿಂಗ್ಸ್ಫೋರ್ಡ್ ಸ್ಮಿತ್ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಡುವೆ ವಾರಕ್ಕೆ 4 ರಿಟರ್ನ್ ವಿಮಾನಗಳನ್ನು ವಿಸ್ತಾರ ಏರ್ ಬಸ್ A330 ವಿಮಾನದ ಮೂಲಕ ಕಾರ್ಯಾಚರಣೆ ನಡೆಸಲಿದೆ.

ಆಸ್ಟ್ರೇಲಿಯಾ & ದಕ್ಷಿಣ ಭಾರತದ ನಡುವೆ ಮೊದಲ ನೇರವಿಮಾನ ಹಾರಾಟ ಇದಾಗಿದೆ. 3ಗಂಟೆ ಕಡಿತಗೊಳಿಸಿ ಬೆಂಗಳೂರು & ಸಿಡ್ನಿ ನಡುವೆ ವೇಗದ ಸಂಚಾರ ನೀಡ್ತಿದೆ ಕ್ವಂಟಾಸ್ ಸಂಸ್ಥೆ. ಬೆಂಗಳೂರಿಗರು ವಾಣಿಜ್ಯ ಪ್ರಯಾಣ & ಖಾಸಗಿ ಸಂಪರ್ಕವನ್ನು ಆಸ್ಟ್ರೇಲಿಯಾ ಜೊತೆ ಹೊಂದಿದೆ. ಸಿಡ್ನಿ ಸಿಟಿ ಹಾರ್ಬರ್ ಬ್ರಿಡ್ಜ್, ಒಪೇರಾ ಹೌಸ್ ಗಳಂತಹ ಆಕರ್ಷಕ ತಾಣಗಳಿಗೆ ಹೆಸರಾದ ಸಿಡ್ನಿ ವಿಶ್ವದ ಅತ್ಯಂತ ಸುಂದರ ನಗರ.

ಹೊಸ ಟೆಕ್ನಾಲಜಿ & ಉತ್ತಮ ಸೇವೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಶಸ್ತಿ ಪಡೆದಿದೆ. ಕ್ವಂಟಾಸ್ ಸಂಸ್ಥೆ ಮೆಲ್ಬೋರ್ನ್ & ದೆಹಲಿ ನಡುವೆ ವಾರಕ್ಕೆ 5ವಿಮಾನ ಹಾರಾಡಲಿವೆ. ಈ ಮೂಲಕ ಉತ್ತರ & ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಗೆ ನೇರ ವಿಮಾನ ಒದಗಿಸೊ ಏಕೈಕ ಸಂಸ್ಥೆಯಾಗಿದೆ. ಸಿಡ್ನಿ-ಬೆಂಗಳೂರು ವಿಮಾನಗಳ ಟಿಕೆಟ್ ಮಾರಾಟಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಟಿಕೆಟ್ ಬೆಲೆ ₹ 78,380 ರಿಂದ ಬೆಲೆ ಪ್ರಾರಂಭವಾಗುತ್ತದೆ. ಮೊದಲ ಬಾರಿಗೆ ದಕ್ಷಿಣ ಭಾರತ ಆಸ್ಟ್ರೇಲಿಯಾಗೆ ನೇರ ಸಂಪರ್ಕ ಹೊಂದಿದೆ.

Edited By : Nirmala Aralikatti
PublicNext

PublicNext

11/04/2022 08:05 pm

Cinque Terre

18.1 K

Cinque Terre

0

ಸಂಬಂಧಿತ ಸುದ್ದಿ