ಪೆಟ್ರೋಲ್, ಡೀಸೆಲ್, ಗ್ಯಾಸ್ ಜೊತೆ ರಾಜ್ಯದ ಜನತೆಗೆ ಈಗಾ ವಿದ್ಯುತ್ ಶಾಕ್. ಯೂನಿಟ್ ವಿದ್ಯುತ್ ದರ 35 ಪೈಸೆ ಏರಿಕೆಯಾಗಿದೆ. ಹೌದು ರಾಜ್ಯಾದ್ಯಂತ ಯೂನಿಟ್ ವಿದ್ಯುತ್ ದರ 35 ಪೈಸೆ ಏರಿಕೆ ಮಾಡಲಾಗಿದ್ದು ಪರಿಷ್ಕೃತ ದರ ಏರಿಕೆ ಏ.1 ರಿಂದ ಜಾರಿಯಲ್ಲಿರಲಿದೆ.
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ದರ ಏರಿಕೆಯ ಮಧ್ಯೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ಕೂಡಾ ವಿದ್ಯುತ್ ದರ ಏರಿಕೆ ಮಾಡಿ ಬೆಲೆ ಏರಿಕೆ ಬೆಂಕಿಗೆ ತುಪ್ಪ ಸುರಿದಿದೆ.
ವಿದ್ಯುತ್ ದರ ಏರಿಕೆಯ ಜೊತೆಗೆ ವಿದ್ಯುತ್ ನಿಗದಿತ ಶುಲ್ಕವೂ ಹೆಚ್ಚಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, (BESCOM) ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು.
PublicNext
04/04/2022 04:19 pm