ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಬಂದ್ ಆಗಿದ್ದ ತುಮಕೂರು ರಸ್ತೆ ಮೇಲ್ಸೇತುವೆ ಇಂದಿನಿಂದ ಪುನಾರಂಭವಾಗಿದೆ. ಅದು ಕೆಲವು ನಿರ್ಭಂದಗಳೊಂದಿಗೆ, ಇ.ಎಲ್.ಎಂ.ವಿ ವೆಹಿಕಲ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ನ್ಯಾಷನಲ್ ಹೈವೆ ಅಥಾರಿಟಿ.ದ್ವಿಚಕ್ರ ವಾಹನಗಳು , ಆಟೊ , ಕಾರ್ ಗಳು ಫ್ಲೈ ಓವರ್ ಮೇಲೆ ಸಂಚಾರ ಮಾಡಬಹುದು.
ಹೆವಿ ಮೋಟಾರ್ ವೆಹಿಕಲ್ ಅಂದ್ರೆ ಲಾರಿ, ಬಸ್ , ಟಿಪ್ಪರ್ ಫ್ಲೈ ಓವರ್ ಮೇಲೆ ಸಂಚಾರ ಮಾಡಲು ಅವಕಾಶವಿಲ್ಲ. ಪಕ್ಕದ ಸರ್ವಿಸ್ ರಸ್ತೆಯಲ್ಲೇ ಎಚ್.ಎಂ.ವಿ ವೆಹಿಕಲ್‌ಗಳು ಸಾಗಬೇಕು. ಫ್ಲೈಓವರ್ ಬಳಿ ಈಗಾಗಲೆ ಎತ್ತರ ಮಿತಿಗೆ ಕಬ್ಬಿಣದ ಸಲಾಕೆಗಳನ್ನು ಅಧಿಕಾರಿಗಳು ಅಳವಡಿಸಿದ್ದಾರೆ.
10 ಅಡಿ ಎತ್ತರದಲ್ಲಿ ಕಬ್ಬಿಣ ಸಲಾಕೆ ಅಡ್ಡಲಾಗಿ ವೆಲ್ಡ್ ಮಾಡಿರೊ ಪೊಲೀಸ್ರು ಎನ್.ಎಚ್.ಎ.ಐ ನಿರ್ದೇಶನದಂತೆ ಎಲ್.ಎಂ.ವಿಗಳ ಓಡಾಡಕ್ಕೆ ವ್ಯವಸ್ಥೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಸಂಚಾರ ಉಪ ಆಯುಕ್ತ ಕುಲದೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.
PublicNext
16/02/2022 06:01 pm