ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಶ್ರಯ ಮನೆಗಾಗಿ ಗ್ರಾ.ಪಂನಲ್ಲಿಯೇ ಹಸುಗಳ ಸಮೇತ ಠಿಕಾಣಿ ಹೂಡಿದ ದಂಪತಿ

ರಾಯಚೂರು: ಆಶ್ರಯ ಮನೆ ನೀಡುವಂತೆ ಆಗ್ರಹಿಸಿ ಪಂಚಾಯತಿಯಲ್ಲಿಯೇ ಕುಟುಂಬವೊಂದು ಠಿಕಾಣಿ ಹೂಡಿದೆ. ಹಸುಗಳನ್ನ ಇಲ್ಲಿಯೇ ಕಟ್ಟಿಹಾಕಿದೆ. ಮಕ್ಕಳ ಜೊತೆಗೆ ಗಂಡ-ಹೆಂಡತಿ ಇಲ್ಲಿಗೆ ಆಗಮಿಸಿ ಅಡುಗೆನೂ ಮಾಡಿದೆ. ಈ ಒಂದು ಘಟನೆ ಲಿಂಗಸುಗೂರು ತಾಲೂಕಿನ ಹೊನ್ನಳಿ ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.

ಗ್ರಾಮದ ಬೀರಪ್ಪ-ಶಾರದಾ ದಂಪತಿ ಮಕ್ಕಳೊಟ್ಟಿಗೆ ಗ್ರಾಮ ಪಂಚಾಯತ್‌ ನಲ್ಲಿಯೇ ಠಿಕಾಣಿ ಹೂಡಿದ್ದಾರೆ. ನಮಗೆ ಮನೆ ಮಂಜೂರು ಮಾಡುವವರೆಗೂ ನಾವು ಇಲ್ಲಿಯೇ ಸಂಸಾರ ನಡೆಸುವುದಾಗಿ ಪಟ್ಟು ಹಿಡಿದಿದ್ದಾರೆ.

ನಮಗೆ ಇರಲು ಮನೆ ಇಲ್ಲ. ಬಿಸಿಲು,ಮಳೆಯಲ್ಲಿಯೇ ಜೀವನ ಸವೆಸುತ್ತಿದ್ದೇವೆ. ನಮಗೆ ಮನೆ ಬೇಕೆ ಬೇಕು ಅಂತಲೇ ಒತ್ತಾಯಿಸಿ ವಿಭಿನ್ನವಾಗಿಯೇ ಹೀಗೆ ಪ್ರತಿಭಟನೆ ಮಾಡುತ್ತಿದ್ದಾರೆ.

Edited By : Shivu K
PublicNext

PublicNext

22/01/2022 09:42 am

Cinque Terre

49.79 K

Cinque Terre

0

ಸಂಬಂಧಿತ ಸುದ್ದಿ