ಯಾದಗಿರಿ: ತಾಲ್ಲೂಕಿನ ಜೀನಕೇರಾ ಗ್ರಾಮದಲ್ಲಿ ಜನರ ಬಲಿ ಪಡೆಯಲೆಂದೆ ಕಾದಿದೆ ಹಳೆಯ ನೀರಿನ ಟ್ಯಾಂಕ್.. ಹೌದು.. ಈ ನೀರಿನ ಟ್ಯಾಂಕ್ ಸಂಪೂರ್ಣ ಹಾಳಾಗಿ ಹೋಗಿದ್ದು, ಇದನ್ನು ನೆಲಸಮಗೊಳಿಸಿ ಮುಂದಾಗುವ ಅನಾಹುತ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಅತೀ ಹೆಚ್ಚು ಜನರು ಓಡಾಡುವ ಸ್ಥಳದಲ್ಲಿ ಇರೋ ಈ ಹಳೆಯದಾದ ನೀರಿನ ತೊಟ್ಟಿ ಹೀಗೋ.. ಹಾಗೋ.. ಬೀಳುವ ಹಂತದಲ್ಲಿದ್ದು, ಸುತ್ತಲೂ ಅಸ್ವಚ್ಛತೆಯಿಂದ ಕೂಡಿದೆ. ತಕ್ಷಣ ಅದನ್ನು ನೆಲಸಮಗೊಳಿಸಿ ಹೊಸ ಟ್ಯಾಂಕ್ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ.
- ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
18/12/2021 07:24 pm