ಗದಗ: ಪಡಿತರ ನೀಡುವಲ್ಲಿ ಸರ್ಕಾರ ಎಡವಟ್ಟು ಮಾಡಿ ಜನರ ಆಕ್ರೋಶಕ್ಕೆ ಗುರಿಯಾಗಿದೆ.ಕಳಪೆ ಗುಣಮಟ್ಟದ ವಸ್ತುಗಳನ್ನು ಫಲಾನುಭವಿಗಳಿಗೆ ನೀಡಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿದೆ.
ಹುಳು, ಕಸ,ಕಡ್ಡಿ ಸಮೇತ ಇರೋ ಪಡಿತರ ಗೋಧಿ ನಗರದ ನ್ಯಾಯಬೆಲೆ ಅಂಗಡಿಗಳಲ್ಲಿ ಕಂಡು ಬಂದಿದೆ. ಕೊರೊನಾದಂಥಹ ಮಹಾಮಾರಿ ಬಂದು ಜನ ಸಾಯುತ್ತಿದ್ದಾರೆ ಅದರ ಮಧ್ಯೆಯು ಇಂಥಹ ಪಡಿತರ ಊಟ ಮಾಡಿ ನಮ್ಮನ್ನ ಆಸ್ಪತ್ರೆಗೆ ಸೇರುವಂತೆ ಮಾಡುತ್ತೀರಿ ಎಂದು ಜನರು ಕುಪಿತಗೊಂಡಿದ್ದಾರೆ.
ಗುಣಮಟ್ಟದ ಪಡಿತರ ನೀಡುವುದಾದ್ರೆ ನೀಡಿ,ಇಲ್ಲವಾದರೆ ಬೇಡ ಹಾಗೂ ಗುಣಮಟ್ಟದ ಪಡಿತರ ಧಾನ್ಯ ವಿತರಿಸಬೇಕೆಂದು ಆಗ್ರಹಿಸಿ ಟೆಂಡರ್ ತೆಗೆದುಕೊಂಡ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
01/12/2021 01:03 pm