ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೆಂಗಳೂರಿನ ರಸ್ತೆ ತುಂಬಾ ಇರುವ ಗುಂಡಿಗಳ ಕುರಿತು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಭಾರತಿ ನಗರ ನಾಗರಿಕ ವೇದಿಕೆ ಸದಸ್ಯರು ಕಾಕ್ಸ್ ಟೌನ್ ನ ಚಾರ್ಲ್ಸ್ ಕಾಂಪ್ ಬೆಲ್ ರಸ್ತೆಯ ಹೊಂಡಾಗುಂಡಿಗೆ ಹೋಮ ಮಾಡಿ ಪೂಜೆ ಸಲ್ಲಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಭಾರತಿ ನಗರ ನಾಗರಿಕರ ವೇದಿಕೆ ಸದಸ್ಯರು ರಸ್ತೆ ಗುಂಡಿಯನ್ನು ಹೂವಿನಿಂದ ಅಲಂಕರಿಸಿ, ಹೋಮ ಮಾಡಿ, ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ವಾಹನ ಚಾಲಕರು ಹಾಗೂ ಪಾದಚಾರಿಗಳ ಜೀವವನ್ನು ರಕ್ಷಿಸುವಂತೆ ಪ್ರಾರ್ಥನೆ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ಭಾರತಿ ನಗರ ನಾಗರಿಕರ ವೇದಿಕೆ ಅಧ್ಯಕ್ಷ ಎನ್. ಎಸ್. ರವಿ ಮಾತನಾಡಿ, ಉದ್ಯಾನ ನಗರಿ ಎಂದು ಖ್ಯಾತಿ ಗಳಿಸಿರುವ ಬೆಂಗಳೂರು ಮಹಾನಗರದ ರಸ್ತೆಗಳಲ್ಲಿರುವ ಗುಂಡಿಗಳಿಂದ ಅಮಾಯಕ ವಾಹನ ಸವಾರರು ಜೀವವನ್ನೇ ಕೈಯಲ್ಲಿ ಹಿಡಿದು ಕೊಂಡು ವಾಹನ ಚಲಾಯಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
PublicNext
30/11/2021 02:23 pm