ಯಾದಗಿರಿ: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಸರಕಾರದಿಂದ ಅನುದಾನ ಬಿಡುಗಡೆಯಾದರು ಕೂಡ ಇನ್ನು ಕೆಲ ಹಳ್ಳಿಗಳಲ್ಲಿ ಅದೆಷ್ಟೋ ಸಮಸ್ಯೆಗಳು ಎದ್ದು ಕಾಣುತ್ತಿವೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕಚಕನೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಕನಹಳ್ಳಿ ಗ್ರಾಮದಲ್ಲಿ ದೇವಸ್ಥಾನಗಳಿಗೆ ಹಾಗೂ ಕುಡಿಯುವ ನೀರಿನ ಬಾವಿಗಳಿಗೆ ಹೋಗುವ ರಸ್ತೆಗಳು ಹಾಗೂ ಚರಂಡಿಗಳು ಸಂಪೂರ್ಣ ಹದಗೆಟ್ಟು ಹೋಗಿವೆ.
ಸ್ವಚ್ಛತೆ ಮಾಡಿಸಲು ಗ್ರಾಮದ ಗ್ರಾ.ಪಂ ಸದಸ್ಯರು ಮುಂದಾಗಿದ್ದಾರೆ. ಆದ್ರೆ ಜನರು ಸ್ವಚ್ಛತೆ ಮಾಡಿಸದ್ರೆ ಸಮಸ್ಯೆ ಸರಿ ಹೋಗಲ್ಲ ಮೊದಲು ಈ ಸಿಸಿ ರಸ್ತೆ ಎತ್ತರ ಮಾಡಬೇಕು. ನಮ್ಮ ಮನೆ ಮುಂದೆ ನಾವೇ ಸ್ವಚ್ಛತೆ ಮಾಡಿಕೊಳ್ಳುತ್ತೇವೆ. ಶಾಶ್ವತವಾಗಿ ಬಗೆಹರಿಯಲು ಈ ಸಮಸ್ಯೆಯನ್ನ ಪಿಡಿಓ ಬಂದು ಆಲಿಸಲಿ ಅಂತಾ ಗ್ರಾಪಂ ಸದಸ್ಯರ ಜೊತೆ ಪಟ್ಟು ಹಿಡಿದಿರೋ ದೃಶ್ಯ ಕಂಡು ಬಂತು.
ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ಕೆಸರು ಗದ್ದೆಯಂತಾದ ರಸ್ತೆಗಳ ಮೇಲೆ ದಿನನಿತ್ಯ ಒಡಾಡಲು ಸಂಕಷ್ಟಪಡುವಂಟಾಗಿದ್ದು, ಕೂಡಲೇ ಸಿಸಿ ರಸ್ತೆ ಕಾಮಗಾರಿ ಶುರು ಮಾಡಿ ಸಮಸ್ಯೆ ಬಗೆ ಹರಿಸುವಂತೆ ಗ್ರಾಮಸ್ಥರು ಅಗ್ರಹಿಸಿದ್ದಾರೆ.
PublicNext
29/11/2021 10:30 am