ವರದಿ: ಗಣೇಶ್ ಹೆಗಡೆ
ಬೆಂಗಳೂರು: ಸಾಕಷ್ಟು ಬೇಡಿಕೆ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೂರು ಹಂತದ ಮೆಟ್ರೋ ಯೋಜನೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ.
ಸಿವಿಲ್ ಕಾಮಗಾರಿ ಗುತ್ತಿಗೆಯನ್ನು ನಾಗಾರ್ಜುನ್ ಕನ್ ಸ್ಟ್ರಕ್ಷನ್ ಕಂಪನಿ ಪಡೆದುಕೊಂಡಿದೆ.ಹೊರ ವರ್ತುಲ ಹಾಗೂ ವಿಮಾನ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಯೋಜನೆಗೆ ಕೇಂದ್ರ ಸರ್ಕಾರ 14,778 ಕೋಟಿ ರೂ. ಅನುದಾನ ಪ್ರಕಟಿಸಿತ್ತು.
ಒಟ್ಟು ಮೂರು ಹಂತದ ಮೆಟ್ರೋ ರೈಲು ಯೋಜನೆ ಕಾರ್ಯ ನಡೆಯಲಿದೆ. ಬೈಯಪ್ಪನಹಳ್ಳಿ - ಬೆನ್ನಿಗಾನಹಳ್ಳಿ , ಕೆ.ಆರ್. ಪುರಂ ಏರ್ ಪೋರ್ಟ್ ವರೆಗೆ ಹಾಗೂ ಹೆಬ್ಬಾಳದಿಂದ ಬಾಗಲೂರು ಕ್ರಾಸ್ ಏರ್ ಪೋರ್ಟ್ ವರೆಗೆ ನಡೆಯಲಿದೆ.
PublicNext
22/11/2021 01:38 pm