ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಒಳ ವರ್ತುಲ ಮೆಟ್ರೋ ರೈಲು ಯೋಜನೆ ಯಾವಾಗ...?

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜಧಾನಿಯಲ್ಲಿ ಪರ್ಯಾಯ ಸಾರಿಗೆ ಎಂದು ನಮ್ಮ ಮೆಟ್ರೋ ರೈಲು ಯೋಜನೆ ಕರೆಸಿಕೊಳ್ಳುತ್ತೆ.ಹೊರ ವರ್ತುಲ ರಸ್ತೆಗಳಿಗೆ ಮೆಟ್ರೋ ಸೇವೆಯಿಂದ ಸಂಚಾರ ದಟ್ಟಣೆ ಕಡಿಮೆ ಆಗಿದೆ. ಆದರೆ, ಒಳ ವರ್ತುಲ ರಸ್ತೆಗಳಲ್ಲಿ ಏಕೆ 'ನಮ್ಮ ಮೆಟ್ರೋ' ರೈಲು ಸಂಚಾರವಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಉಪ ನಗರಗಳಿಗೆ ಸಂಪರ್ಕ ಕಲ್ಪಿಸುವ 34 ಕಿ.ಮೀ. ಮಾರ್ಗದ ಒಳ ವರ್ತುಲ ರೈಲು ಯೋಜನೆ ಪ್ರಸ್ತಾವನೆಗೆ ಬಿಎಂ ಆರ್ ಸಿಎಲ್ ತುಟಿಕ್ ಪಿಟಿಕ್ ಎನ್ನುತ್ತಿಲ್ಲ.

ಯಶವಂತಪುರ - ಮೇಖ್ರಿ ಸರ್ಕಲ್, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಇಂದಿರಾ ನಗರ, ದೊಮ್ಮಲೂರು, ಕೋರಮಂಗಲ, ಟೋಲ್ ಗೇಟ್, ಕಂಠೀರವ ಸ್ಟುಡಿಯೋ, ಮಹಾಲಕ್ಷ್ಮಿ ಬಡಾವಣೆಗೆ ಒಳ ವರ್ತುಲ ಮಾರ್ಗ ಸಂಪರ್ಕ ಕಲ್ಪಿಸುತ್ತವೆ.

ಈ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ , ಟ್ರಾನ್ಸ್‌ಪೋರ್ಟೆಶನ್ ರಿಸರ್ಚ್ ಲ್ಯಾಬ್ ಹಾಗೂ ಸಮಗ್ರ ಸಂಚಾರ ಯೋಜನೆ ಪ್ರಸ್ತಾವನೆ ಸಲ್ಲಿಸಿದೆ.

ಆದರೆ, ಈ ಕುರಿತು ಬಿಎಂಆರ್ ಸಿಎಲ್ ಎಂಡಿ ಅವರನ್ನು ಪ್ರಶ್ನಿಸಿದಾಗ ಒಳ ವರ್ತುಲ ಮಾರ್ಗ ಕಾಮಗಾರಿ ಬಗ್ಗೆ ಚರ್ಚೆ ಆಗುತ್ತಿದೆ ಎಂದರು.

Edited By : Manjunath H D
PublicNext

PublicNext

19/11/2021 11:22 am

Cinque Terre

37.35 K

Cinque Terre

1

ಸಂಬಂಧಿತ ಸುದ್ದಿ