ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ನಮ್ಮ ಮೆಟ್ರೋ' ರೈಲು ಪ್ರಯಾಣಿಕರ ಸಂಖ್ಯೆ ಏರಿಕೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಕೊರೊನಾ 2ನೇ ಅಲೆ ಬಳಿಕ 'ನಮ್ಮ‌ ಮೆಟ್ರೋ' ರೈಲು ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆ‌ ಕಂಡು ಬಂದಿದೆ.

ಕಳೆದ ಸೋಮವಾರ ನ. 15 ರಂದು 3.1 ಲಕ್ಷ‌ ಮಂದಿ 'ನಮ್ಮ‌ ಮೆಟ್ರೋ' ದಲ್ಲಿ ಪ್ರಯಾಣಿ ಸಿದ್ದಾರೆ‌.

ಇದರಲ್ಲಿ ಪರ್ಪಲ್ ಲೈನ್ 1.5 ಹಾಗೂ ಗ್ರೀನ್ ಲೈನ್ 1.6 ಲಕ್ಷ‌ ಮಂದಿ ಅದೇ ದಿನ ಪ್ರಯಾ ಣಿಸಿದ್ದಾರೆ.

ಕೋವಿಡ್ ಪೂರ್ವದಲ್ಲಿ ವರ್ಷದ ಹಿಂದೆ 5.2 ಲಕ್ಷ ಮಂದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರು.‌

ಕೋವಿಡ್ 2ನೇ ಅಲೆ ಬಳಿಕ ಸೆಪ್ಟೆಂಬರ್ 7, 2021ರ ನಂತರ 3.1 ಲಕ್ಷದಷ್ಟು ಅತಿ ಹೆಚ್ಚು ಪ್ರಯಾಣಿಕರು ಸಂಚರಿಸಿರೋದು ದಾಖಲೆಯಾಗಿದೆ.

ಇದರಿಂದ ಆ ಒಂದು ದಿನ 75 ಲಕ್ಷ ರೂ. ನಷ್ಟು ಬಿಎಂಆರ್ ಸಿ ಎಲ್ ಗೆ ಸಂದಾಯವಾಗಿದೆ.

ಕೋವಿಡ್ ಗಿಂತ ಹಿಂದಿನ ದಿನದಲ್ಲಿ ನಿತ್ಯ 1 ಕೋಟಿ ರೂ.‌ನಷ್ಟು ಕಲೆಕ್ಷನ್ ಆಗುತ್ತಿತ್ತು.‌ ಬಳಿಕ ಕೋವಿಡ್ ಅತಿಯಾದ ಮೇಲೆ 59 ಲಕ್ಷ‌ ರೂ. ಇಳಿಕೆ ಕಂಡು ಬಂದಿತ್ತು.‌

ರಾಜಧಾನಿಯ ಜನರ ಜೀವನ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿರುವ ಹಿನ್ನೆಲೆಯಲ್ಲಿ 'ನಮ್ಮ ಮೆಟ್ರೋ' ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ.

Edited By : Nagesh Gaonkar
PublicNext

PublicNext

18/11/2021 05:33 pm

Cinque Terre

31.79 K

Cinque Terre

0

ಸಂಬಂಧಿತ ಸುದ್ದಿ