ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪ ತಯಾರಿಸೋ ಸ್ವಸಹಾಯ ಮಹಿಳಾ ಸಂಘಗಳಿಗೆ ಬೆಂಬಲಿಸಿ: ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು: ದೀಪಗಳ ಹಬ್ಬ ಬರ್ತಿದೆ. ಈ ಹಬ್ಬಕ್ಕೆ ಸ್ವಸಹಾಯ ಮಹಿಳಾ ಸಂಘಗಳು ದೀಪ ತಯಾರಿಸುತ್ತಿವೆ. ಈಗಾಗಲೇ ಮಣ್ಣಿನಿಂದಲೇ ದೀಪಗಳನ್ನ ಸಿದ್ಧಗೊಳಿಸುತ್ತಿರೋ ಮಹಿಳೆಯರ ಆ ಒಂದು ದೃಶ್ಯ ಅದ್ಭುತವಾಗಿಯೇ ಇದೆ. ಮಣ್ಣಿನ ದೀಪಗಳಿಗೂ ಮಾನ್ಯತೆ ಸಿಗಬೇಕು. ಅವುಗಳನ್ನ ಮಾಲ್ ಗಳಲ್ಲಿ ಮಾರಾಟ ಮಾಡೋ ವ್ಯವಸ್ಥೆ ಆಗಬೇಕು ಎಂದು ನಿರ್ಧರಿಸಿರೋ ಸಚಿವ ಅಶ್ವತ್ಥ ನಾರಾಯಣ, ದೀಪ ತಯಾರಿಸೋ ಮಹಿಳೆಯರ ಆ ಒಂದು ವೀಡಿಯೋವನ್ನ ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಸ್ವಸಹಾಯ ಸಂಘದ ಮಹಿಳೆಯರ ಸ್ವಾವಲಂಬಿ ಹೆಜ್ಜೆಗಳನ್ನ ಬೆಂಬಲಿಸೋಣ. ದೀಪಾವಳಿ ಸಮಯದಲ್ಲಿ ಎಲ್ಲರ ಬದುಕಿಗೂ ಖುಷಿ ನೀಡೋಣ ಅಂತಲೂ ಬರೆದು ಈಗಲೇ ಶುಭ ಹಾರೈಸಿದ್ದಾರೆ ಸಚಿವ ಅಶ್ವತ್ಥ ನಾರಾಯಣ.

Edited By :
PublicNext

PublicNext

27/10/2021 02:13 pm

Cinque Terre

38.91 K

Cinque Terre

0