ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಅಧಿಕಾರಿಗಳಿಗೆ ಕಾಣದ ಕಣಗಿನಾಳ ಗ್ರಾಮದ ಸಮಸ್ಯೆ : ಗ್ರಾ.ಪಂ ಗೆ ಮುತ್ತಿಗೆ

ಗದಗ: ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಗದಗ ತಾಲೂಕಿನ‌ ಕಣಗಿನಹಾಳ ಗ್ರಾಮಸ್ಥರು ಹಾಗೂ ಜಯಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಗ್ರಾಮ‌ ಪಂಚಾಯತಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಿದರು. ಹಲವು ವರ್ಷಗಳಿಂದ ಇಲ್ಲಿನ ನಾಲ್ಕನೆ ವಾರ್ಡಿನಲ್ಲಿ ಶೌಚಾಲಯ, ಚರಂಡಿ, ರಸ್ತೆ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಸಮಸ್ಯೆ ಕೇಳಲು ಸಂಭಂಧಿಸಿದ ಅಧಿಕಾರಿಗಳತ್ತ ಹೋದರೆ ಸಾರ್ವಜನಿಕರ ಮೇಲೆ ಗೂಂಡಾವರ್ತನೆ ತೋರುತ್ತಾರೆ.

ಚರಂಡಿ ನೀರು ಹಾಗೂ ಕೊಳಚೆ ನೀರು ರಸ್ತೆ ಮೇಲೆ ನಿಲ್ಲುವದರಿಂದ ಗ್ರಾಮದ ಮಕ್ಕಳಿಗೆ ಮಲೇರಿಯಾ, ಡೆಂಗ್ಯೂ ನಂಥ ಮಾರಕ‌ ಖಾಯಿಲೆಗಳಿಗೆ ಎಡಮಾಡಿಕೊಟ್ಟಿದೆ. ಗ್ರಾಮಸ್ಥರ ಆರೋಗ್ಯದಲ್ಲಿಯೂ ಏರುಪೇರು ಉಂಟಾಗಿದೆ. ಈಗಾಗಲೇ ಸಾಕಷ್ಟು ಬಾರಿ ಹಿರಿಯ ಅಧಿಕಾರಿಗಳಿಗೂ ಮನವಿ‌ ಮಾಡಿದರೂ ಸಹ ಯಾರೂ ಸಹ ಇತ್ತ ತಿರುಗಿ ನೋಡಿಲ್ಲ. ಕಾಮಗಾರಿಗಳಿಗೆ ಪಂಚಾಯತನಲ್ಲಿ ಅನುದಾನ ಇದ್ದರೂ ದುರ್ಬಳಕೆಯಾಗಿದೆ. ಹೀಗಾಗಿ ಗ್ರಾಮ ಪಂಚಾಯತಿಯ ಸಂಬಂಧಿಸಿದ ಅಧಿಕಾರಿಗಳನ್ನು ತನಿಖೆ ನಡೆಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಕ್ಷಣ ಸಮಸ್ಯೆ ಸರಿಪಡಿಸಿ ಸಾರ್ವಜನಿಕರ ಹಾಗೂ ಮಕ್ಕಳ ಪ್ರಾಣವನ್ನ ರಕ್ಷಿಸಬೇಕೆಂದು ಸಂಘಟನಕಾರರು ಆಗ್ರಹಿಸಿದರು.ನಂತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯತ ಅಧಿಕಾರಿಯನ್ನ ಪ್ರತಿಭಟನಾಕಾರರು ಗ್ರಾಮದ ಕೊಳಚೆ ರಸ್ತೆಗಳತ್ತ ಕರೆದೊಯ್ದ ಸಮಸ್ಯೆಗಳ ಬಗ್ಗೆ ವಿವರಿಸಿ ಮನವಿ ಸಲ್ಲಿಸಿದರು.

Edited By : Manjunath H D
PublicNext

PublicNext

25/10/2021 06:21 pm

Cinque Terre

30.05 K

Cinque Terre

0

ಸಂಬಂಧಿತ ಸುದ್ದಿ