ಹುಬ್ಬಳ್ಳಿ: ನೈಋತ್ಯ ರೈಲ್ವೇ ವಲಯದ ರೈಲುಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಯಾಗಿದೆ. ಈ ಬಗ್ಗೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಈ ಕೆಳಕಂಡಂತ ರೈಲುಗಳ ಸಂಚಾರ ಸೇವೆ ರದ್ದು ಪಡಿಸಲಾಗಿದೆ. ಕೆಲ ರೈಲುಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿರೋದಾಗಿ ತಿಳಿಸಿದ್ದಾರೆ.
ರದ್ದುಗೊಳಿಸಲಾಗಿರುವ ರೈಲುಗಳು..
ಈ ಕೆಳಗೆ ತಿಳಿಸಿರುವ ವಿವರಗಳ ಪ್ರಕಾರ ನಾಯಂಡ ಹಳ್ಳಿ ಯಾರ್ಡ್‌ದಲ್ಲಿ ಥಿಕ್ ವೆಬ್ ಸ್ವಿಚ್‌ಗಳ ಕೆಲಸದ ಅಳವಡಿಕೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ತೆಗೆದುಕೊಂಡು ಕೆಳಗಿನ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ.
1. ರೈ. ಸಂ. 06559 ಕೆಎಸ್‌ಆರ್ ಬೆಂಗಳೂರುದಿಂದ ಚಲಿಸುವ ಕೆಎಸ್‌ಆರ್ ಬೆಂಗಳೂರು – ಮೈಸೂರು ಮೆಮು ರೈಲು 03.11.2021 ಮತ್ತು 12.11.2021 ರಂದು ರದ್ದುಗೊಳಿಸಲಾಗುತ್ತದೆ.
2. ರೈ. ಸಂ. 06560 ಮೈಸೂರುದಿಂದ ಚಲಿಸುವ ಮೈಸೂರು – ಕೆಎಸ್‌ಆರ್ ಬೆಂಗಳೂರು ಮೆಮು ರೈಲು 02.11.2021 ಮತ್ತು 11.11.2021 ರಂದು ರದ್ದುಗೊಳಿಸಲಾಗುತ್ತದೆ.
ರೈಲುಗಳ ಮಾರ್ಗ ಬದಲಾವಣೆ..
23.10.2021 ರಿಂದ 27.10.2021 ರವರೆಗೆ ದ್ವಿ- ಪಥ ಕಾಮಗಾರಿಯ ಕಾರ್ಯಾರಂಭಕ್ಕೆ ಸಂಬಂಧಪಟ್ಟಂತೆ ಭಟ್ಟನಗರ (ಪೂರ್ವ ರೈಲ್ವೆ) ಮತ್ತು ಬಾಲ್ಟಿಕುರಿ (ಆಗ್ನೇಯ ರೈಲ್ವೆ) ನಿಲ್ದಾಣದಲ್ಲಿ ಪೂರ್ವ – ಇಂಟರ್ಲಾಕಿಂಗ್ ಮತ್ತು ನಾನ್ – ಇಂಟರಲಾಕಿಂಗ್ ಕೆಲಸದ ನಿಮಿತ್ತವಾಗಿ ಈ ಕೆಳಗಿನ ರೈಲುಗಳ ಮಾರ್ಗವನ್ನು ಹೌರಾ, ಅಂಡುಲ್, ಖರಗ್‌ಪುರದ ಮೂಲಕ ಚಲಿಸುತ್ತದೆ.
1. ಕೆ.ಎಸ್. ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 02249 ಕೆ.ಎಸ್. ಆರ್ ಬೆಂಗಳೂರು – ನ್ಯೂ ಟಿನ್ಸುಕಿಯಾ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.
2. ಬೆಂಗಳೂರು ಕಂಟೋನ್ಮೆಂಟ್‌ದಿಂದ ಹೊರಡುವ ರೈಲು ಸಂಖ್ಯೆ. 05487 ಬೆಂಗಳೂರು ಕಂಟೋನ್ಮೆಂಟ್ – ಅಗರ್ತಲಾ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿಯಲ್ಲಿ ನಿಲುಗಡೆಯೊಂದಿಗೆ ಖರಗ್‌ಪುರ, ಆಂದುಲ್, ಹೌರಾ ಮಾರ್ಗ ಮೂಲಕ ಚಲಿಸಲಿದೆ.
3.ಭಾಗಲಪುರದಿಂದ ಹೊರಡುವ ರೈಲು 02254 ಭಾಗಲಪುರ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು 27.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ & ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.
4. ಅಗರ್ತಲಾದಿಂದ ಹೊರಡುವ ರೈಲು ಸಂಖ್ಯೆ 02984 ಅಗರ್ತಲಾ – ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ & ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.
5. ಗುವಾಹಟಿದಿಂದ ಹೊರಡುವ ರೈಲು 02510 ಗುವಾಹಟಿ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್ ವಿಶೇಷ ರೈಲು 24.10.2021, 25.10.2021 & 26.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ & ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.
6. ಮುಜಪ್ಪರಪುರದಿಂದ ಹೊರಡುವ ರೈಲು 05228 ಮುಜಪ್ಪರಪುರ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು 25.10.2021 ರಂದು ದನಕುಣಿ ನಿಲ್ದಾಣದಲ್ಲಿ ನಿಲುಗಡೆಯೊಂದಿಗೆ ಹೌರಾ, ಅಂಡುಲ್ & ಖರಗ್‌ಪುರ ಮಾರ್ಗವಾಗಿ ಚಲಿಸಲಿದೆ.
PublicNext
23/10/2021 03:26 pm