ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಮೂಲಭೂತ ಸೌಕರ್ಯ ವಂಚಿತ ರಂಗಾಚಾರಿ ಆಶ್ರಯ ಪ್ಲಾಟಿನ ನಿವಾಸಿಗಳು

ಗದಗ: ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಪುರಸಭೆಯವರು ಬಡವರಿಗೆ ವಸತಿ ಆಶ್ರಯ ಮನೆ ನೀಡಲು ಪಟ್ಟಣದ ರಂಗಾಚಾರ್ಯರರ ಹೊಲವನ್ನು ಪಡೆದು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಲ್ಲಿ ಆಶ್ರಯ ವಸತಿ ಯೋಜನೆಯಡಿ ಪ್ಲಾಟು ಗಳನ್ನು ನಿರ್ಮಾಣ ಮಾಡಿ ಕಡುಬಡ ಕುಟುಂಬಗಳಿಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ಬಡ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಆದರೆ ಅಲ್ಲಿನ ಸಮಸ್ಯೆ ನೋಡಿದರೇ ನಿಜಕ್ಕೂ ಬೇಸರ ಮೂಡುವುದು ಖಂಡಿತ.

ಹೌದು.. ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಇಲ್ಲದೆ ತಮ್ಮ ಮನೆಗಳಿಗೆ ವಾಹನ ತೆಗೆದುಕೊಂಡು ಹೋಗುವುದು ಸಹ ತೊಂದರೆಯಾಗಿದೆ. ಮಳೆಯ ಬಂದ ಸಂದರ್ಭದಲ್ಲಿ ಮನೆಯ ಮುಂದೆ ನೀರುಗಳ ನಿಂತು ದೊಡ್ಡ ಗುಂಡಿ ಬಿದ್ದು, ನೀರು ಹರಿದು ಹೋಗಲು ಚರಂಡಿ ಇಲ್ಲದೆ ರಸ್ತೆ ಎನ್ನುವುದು ಕಾಣದಂತಾಗಿ ಹುಲ್ಲಿನ ಗದ್ದೆಗಳು ಬೆಳೆದು ಹೊಲದ ಗದ್ದೆಯಂತೆ ಮಾರ್ಪಟ್ಟಿದೆ ಇದರಿಂದ ನಿವಾಸಿಗಳು ದಿನನಿತ್ಯ ನರಕಯಾತನೆಯನ್ನು ಎದುರಿಸುವಂತಾಗಿದೆ.

ರಾತ್ರಿ ಸಮಯದಲ್ಲಿ ನಿವಾಸಿಗಳು ತಮ್ಮ ಮನೆಯಿಂದ ಹೊರಗಡೆ ಬಾರದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೇ ಊರಿನ ಹೊರಭಾಗದಲ್ಲಿರುವ ಆಶ್ರಯ ಮನೆಗಳು ಇಲ್ಲಿಯ ಅಕ್ಕ ಪಕ್ಕದಲ್ಲಿ ಹೊಲಗದ್ದೆಗಳು ಇದ್ದು ಹುಳುಗಳ ಹಾಗೂ ಜಂತುಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿ ಸಮಯದಲ್ಲಿ ಹೊರಗಡೆ ಬಾರದೆ ನರಕಯಾತನೆ ಅನುಭವಿಸುವಂತಾಗಿದೆ‌. ಈ ಆಶ್ರಯ ಬಡಾವಣೆ ಪಟ್ಟಣದ ಪುರಸಭೆಯ 22 ನೇ ವಾರ್ಡಿನ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ವಾರ್ಡಿನ ಸದಸ್ಯರು ಹಾಗೂ ಪುರಸಭೆಯ ಅಧಿಕಾರಿಗಳು ಆದಷ್ಟು ಬೇಗನೇ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಇಲ್ಲಿ ವಾಸ ಮಾಡುತ್ತಿರುವ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ವಾರ್ಡಿನ ನಿವಾಸಿಗಳು ಆಗ್ರಹಿಸಿದ್ದಾರೆ.

Edited By : Shivu K
PublicNext

PublicNext

12/10/2021 09:53 am

Cinque Terre

35.5 K

Cinque Terre

0

ಸಂಬಂಧಿತ ಸುದ್ದಿ