ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಈ ರಸ್ತೆ ದುರಸ್ಥಿ ಯಾವಾಗ?

ಗದಗ : ಗದಗ ಬೆಟಗೇರಿ ಅವಳಿ ನಗರದ ರಸ್ತೆ ಯಾವುದು ಸರಿ ಇಲ್ಲ ಎಂಬ ಮಾತಿಗೆ ಪುಷ್ಟಿ ನೀಡುವಂತೆ ಬೆಟಗೇರಿಯ ಪ್ರಸಿದ್ದ ಅಂಬಾಭವಾನಿ ದೇವಸ್ಥಾನದ ಮುಂದೆ ಬಿದ್ದಿರುವ ಈ ಗುಂಡಿ ಸಾವನ್ನು ಕಾದುಕುಳಿತ ಜವರಾಯನಂತೆ ಇದೆ.

ಇನ್ನು ಅನೇಕ ಬಾರಿ ಈ ಜಾಗದಲ್ಲಿ ವಾಹನಸಮೇತ ಅಪಘಾತಕ್ಕೀಡಾದ ಉದಾರಣೆಗಳಿವೆ. ಇನ್ನು ಕೆಲವೇ ದಿನದಲ್ಲಿ ನವರಾತ್ರಿಯ ಸಂಭ್ರಮ ಈ ವೇಳೆ ಮಕ್ಕಳು ಹಿರಿಯರು ಮಹಿಳೆಯರು ದೇವಸ್ಥಾನಕ್ಕೆ ಬರುವುದು ವಾಡಿಕೆ ಆದರೆ ಈ ಹದಗೆಟ್ಟ ರಸ್ತೆಯನ್ನು ನೋಡಿದ್ರೆ ಹಬ್ಬದಲ್ಲಿ ಅನಾಹುತಗಳಾಗುವುದು ಗ್ಯಾರಂಟಿ ಎನ್ನುವಂತಿದೆ.

ಸದ್ಯ ಈ ಎಲ್ಲ ಅವಸ್ಥೆಯನ್ನು ಕಂಡ ಸ್ಥಳೀಯ ನಿವಾಸಿಗಳು ರಸ್ತೆ ದುರಸ್ಥಿ ಮಾಡುವಂತೆ ಮನವಿ ಮಾಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡ ಬೇಕಿದೆ.

Edited By : Shivu K
PublicNext

PublicNext

05/10/2021 03:41 pm

Cinque Terre

54.04 K

Cinque Terre

5

ಸಂಬಂಧಿತ ಸುದ್ದಿ