ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಲ್ಲಾಸ್ಪತ್ರೆ ಮಾರ್ಗಕ್ಕೆ ಬಂದವರು ನೇರವಾಗಿ ಜಿಲ್ಲಾಸ್ಪತ್ರೆಗೆ ಹೋಗುವರಯ್ಯ

ಗದಗ: ಗದಗ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದೆ. ಈ ಮಾರ್ಗದಲ್ಲಿ ಆರೋಗ್ಯವಿದ್ದವರೆ ಸಂಚರಿಸಿದ ಕೂಡಲೇ ಅನಾರೋಗ್ಯಕ್ಕೆ ಈಡಾಗುತ್ತಾರೆ ಎಂದರೆ ಅದು ಅತಿಶಯೋಕ್ತಿ ಅಲ್ಲ.

ಇತ್ತೀಚೆಗಷ್ಟೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಗದಗ ನಗರಕ್ಕೆ ಆಗಮಿಸಿದ್ದರು. ಆಗ ಅಧಿಕಾರಿಗಳು ಈ ರಸ್ತೆಯ ಕೆಲವು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದರು. ಆದ್ರೆ ಸಿಎಂ ಬಂದು ಹೋದ ನಂತರ ಮತ್ತದೇ ರಾಗ ಅದೇ ಹಾಡು ಎಂಬಂತಾಗಿದೆ.

ಇನ್ನು ಮಳೆ ಬಂದಾಗಲಂತೂ ಇಲ್ಲಿನ ಪರಿಸ್ಥಿತಿ ಹೇಳತೀರದು. ನಿತ್ಯ ಇಲ್ಲಿ ಸಂಚರಿಸುವ ವಾಹನಗಳು ಹರಸಾಹಸ ಪಡಬೇಕಿದೆ. ಒಂದು ಜಿಲ್ಲಾಸ್ಪತ್ರೆಗೆ ಸಂಪರ್ಕಿಸುವ ರಸ್ತೆಯೇ ಹೀಗಿದೆ ಎಂದ ಮೇಲೆ ನಗರದ ಇನ್ನಿತರ ರಸ್ತೆಗಳ ಸ್ಥಿತಿ ಹೇಗಾಗಿರಬೇಡ ಹೇಳಿ? ಅಂತಿದ್ದಾರೆ ಗದಗ ನಗರದ ಜನ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನಹರಿಸಿ ರಸ್ತೆ ರಿಪೇರಿ ಮಾಡಿಸಿ ಅನ್ನೋದು ಸ್ಥಳೀಯರ ಒತ್ತಾಯ.

Edited By : Shivu K
PublicNext

PublicNext

02/10/2021 05:11 pm

Cinque Terre

64.34 K

Cinque Terre

1

ಸಂಬಂಧಿತ ಸುದ್ದಿ