ಚಿತ್ರದುರ್ಗ : ಹಿರಿಯೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪದ ಪಟ್ರೆಹಳ್ಳಿಯಲ್ಲಿ ಅಂಡರ್ ಪಾಸ್ ಬ್ರಿಡ್ಜ್ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದರಿಂದ ನೀರು ನಿಂತಿದ್ದು ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ರಾತ್ರಿ ಸುರಿದ ಮಳೆಗೆ ಅಂಡರ್ ಪಾಸ್ ಬ್ರಿಡ್ಜ್ ಕೆಳಗೆ ಸಾಕಷ್ಟು ನೀರು ತುಂಬಿಕೊಂಡಿದೆ. ಇದರ ಮಧ್ಯೆ ಟಾಟಾ ಎಸಿ ವಾಹನವೊಂದು ಹಿಂದಕ್ಕೂ ಹೋಗದೆ, ಮುಂದಕ್ಕೂ ಹೋಗದೆ ನಡು ನೀರಿನಲ್ಲಿ ಸಿಲುಕಿ ಗಾಡಿ ಹೊರತೆಗೆಯಲು ಚಾಲಕ ಹರಸಾಹಸ ಪಟ್ಟಿದ್ದಾನೆ.
ಕೊನೆಗೆ ಟಾಟಾಎಸಿ ವಾಹನಕ್ಕೆ ಹಗ್ಗ ಕಟ್ಟಿ ಟ್ರಾಕ್ಟರ್ ಮೂಲಕ ಎಳೆಯಲಾಗಿದೆ.
ರಸ್ತೆಯಿಂದ ಹಾಗೂ ಬೇರೆ ಬೇರೆ ಕಡೆಗಳಿಂದ ನೀರು ಹರಿದು ಬಂದು ಬ್ರಿಡ್ಜ್ ಕೆಳಗೆ ನಿಲ್ಲುವುದರಿಂದ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಓಡಾಡಲು ತೀರಾ ತೊಂದರೆಯಾಗಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆಯನ್ನು ಬಗೆಹರಿಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
PublicNext
02/10/2021 03:39 pm