ಗದಗ: ತಾಲೂಕಿನ ಪಾಪನಾಶಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ಮಾಡಿದರು.
ಪ್ರತಿದಿನ ಆಧಾರ್ ಕಾರ್ಡ ತೋರಿಸಿ ಕಾಲೇಜಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಇಂದಿನಿಂದ ಕಡ್ಡಾಯವಾಗಿ ಪಾಸ್ ತೋರಿಸಬೇಕೆಂದು ಕಂಡಕ್ಟರ್ ಪ್ರಶ್ನಿಸುತ್ತಿರುವುದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಮುಂಡರಗಿ ಹಾಗೂ ಗದಗ ಮಾರ್ಗದ ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಒಂದುಕಡೆ ಕಾಲೇಜು ಪಾಸ್ ಇಲ್ಲದೇ ಆಧಾರ್ ಕಾರ್ಡ್ ತೋರಿಸುತ್ತೇವೆ ಎಂದು ಹಠ ಹಿಡಿದಿರೋ ವಿದ್ಯಾರ್ಥಿಗಳು ಇನ್ನೊಂದೆಡೆ ಕಾಲೇಜ್ ಬಸ್ ಪಾಸ್ ತೋರಿಸಿದ್ರೆ ಮಾತ್ರ ಪ್ರಯಾಣಕ್ಕೆ ಅವಕಾಶ ಎಂದು ಪಟ್ಟು ಹಿಡಿದ ಕಂಡಕ್ಟರ್ .
ಒಟ್ಟಿನಲ್ಲಿ ಕಂಡಕ್ಟರ್ ಮತ್ತು ವಿದ್ಯಾರ್ಥಿಗಳ ಗಲಾಟೆಯಿಂದಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು ಮಾತ್ರ ವಿಪರ್ಯಾಸ.
PublicNext
27/09/2021 04:13 pm