ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಣಕಲ್ ರೈಲ್ವೆ ನಿಲ್ದಾಣದ ಕೆಳಸೇತುವೆ ಲೋಕಾರ್ಪಣೆ ಮಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ- ಶಿರಡಿನಗರ ‌ಹಾಗೂ ಉಣಕಲ್ ಸಂಪರ್ಕಿಸುವ ಉಣಕಲ್ ರೈಲ್ವೇ ನಿಲ್ದಾಣದ ಕೆಳಸೇತುವೆಯನ್ನು, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ಲೋಕಾರ್ಪಣೆ ಮಾಡಿದರು.

5.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ, 33.66 ಮೀ .ಉದ್ದದ, 7.5 ಮೀ. ಅಗಲದ, 4.5 ಮೀ. ಎತ್ತರದ ಸೇತುವೆಯನ್ನು ನೈರುತ್ಯ ರೈಲ್ವೇ ನಿರ್ಮಿಸಿದೆ. ಉಣಕಲ್ ಹಾಗೂ ಶಿರಡಿನಗರ ಸಂಪರ್ಕಿಸುವ 65 ಮೀ. ಉದ್ದದ ಕಾಂಕ್ರೀಟ್ ರಸ್ತೆ ಸಹ ನಿರ್ಮಿಸಲಾಗಿದೆ. ಇದರಿಂದ ರಾಜನಗರ , ಶಿರಡಿನಗರ , ಪರ್ತಕರ್ತ ನಗರ ಹಾಗೂ ಉಣಕಲ್ ನಡುವೆ ಓಡಾಟ ನಡೆಸುವ ವಾಹನ ಸವಾರಿಗೆ ಅನುಕೂಲವಾಗಿದೆ. ಉಣಕಲ್ ಪ್ರದೇಶದಲ್ಲಿ ರಸ್ತೆ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಪುಣೆ - ಬೆಂಗಳೂರು ರಸ್ತೆಗೆ ರಾಜನಗರ , ಶಿರಾನಗರ , ಫಾರೆಸ್ಟ್ ಕಾಲೋನಿ ಮತ್ತು ಉಣಕಲ್ ಗ್ರಾಮಗಳನ್ನು ಸಂಪರ್ಕಿಸುತ್ತದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಶಾಸಕ ಪ್ರದೀಪ್ ಶೆಟ್ಟರ್, ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರು ಸಂಜೀವ್ ಕಿಶೋರ್, ವಿಭಾಗೀಯ ರೈಲ್ವೇ ವ್ಯವಸ್ಥಾಪಕರು ಅರವಿಂದ್ ಮಾಲಖೆಡೆ, ಸಿ.ಪಿ.ಆರ್.ಓ. ಅನೀಶ್ ಹೆಗಡೆ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಪಾಲಿಕೆ ಸದಸ್ಯರಾದ ರಾಣಜ್ಣ ಕೊರವಿ, ತಿಪ್ಪಣ್ಣ ಮಜ್ಜಿಗಿ, ಉಮೇಶ್‌ಗೌಡ ಕೌಜಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Edited By : Nirmala Aralikatti
PublicNext

PublicNext

26/09/2021 08:05 pm

Cinque Terre

24.92 K

Cinque Terre

0

ಸಂಬಂಧಿತ ಸುದ್ದಿ