ಸೇಡಂ: ತಾಲೂಕಿನ ಬೊಂಡೆಂಪಲ್ಲಿ ಗ್ರಾಮದ ವಿದ್ಯಾರ್ಥಿನಿಯರ ತಾಳ್ಮೆಯ ಕಟ್ಟೆ ಒಡೆದಿದೆ. ತಮ್ಮೂರಿಗೆ ನಿಯಮಿತವಾಗಿ ಬಸ್ ಸೌಲಭ್ಯ ಒದಗಿಸಿ ಅಂತಾ ಎಷ್ಟೇ ಕೇಳಿಕೊಂಡರೂ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ತಾಲೂಕಿನ ಮುಧೋಳ ಗ್ರಾಮದಲ್ಲಿ ಇಂದು ಮಂಗಳವಾರ ಬೆಳಿಗ್ಗೆ ಸುರಿವ ಮಳೆಯನ್ನೂ ಲೆಕ್ಕಿಸದೇ ಬಸ್ ತಡೆದು ಪ್ರತಿಭಟಿಸಿದ್ದಾರೆ.
ಬಸ್‌ಗೆ ಅಡ್ಡಲಾಗಿ ಮಾನವ ಸರಪಳಿ ಮಾಡಿ ಸುಮಾರು ಹೊತ್ತು ನಿಂತು ಪ್ರತಿಭಟಿಸಿದ ಶಾಲಾ ವಿದ್ಯಾರ್ಥಿನಿಯರು ತಮ್ಮ ಆಕ್ರೋಶವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಈಗ ಭಾರಿ ಸದ್ದು ಮಾಡ್ತಿದ್ದು ಈ ವಿಷಯ ಸಿಎಂ ಗಮನಕ್ಕೆ ಬರುವವರೆಗೂ ಶೇರ್ ಮಾಡಿ ಎಂದು ಸಾರ್ವಜನಿಕರು ಕಾಮೆಂಟ್ ಮಾಡುತ್ತಿದ್ದಾರೆ.
PublicNext
21/09/2021 09:58 pm