ಚಿತ್ರದುರ್ಗ: ಯಾವುದೇ ಒಂದು ಕಾಮಗಾರಿ ಮಾಡಬೇಕಾದರೆ ಅದಕ್ಕೆ ಬೇಕಾಗಿರುವ ಸಾಮಾಗ್ರಿಗಳನ್ನು ಹೊಸದಾಗಿ ತಂದು ಗುಣಮಟ್ಟದ ಕಾಮಗಾರಿ ಮಾಡಬೇಕು ಎಂಬುದು ಸರ್ಕಾರದ ನಿಯಮ ಆದರೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ಐತಿಹಾಸಿಕ ಕಲ್ಯಾಣಿಯನ್ನು ಜಿರ್ಣೋದ್ದಾರ ಮಾಡುವ ಹೆಸರಿನಲ್ಲಿ ಬಿಇಓ ಕಚೇರಿಯ ಹಳೆ ಕಟ್ಟಡದ ಕಲ್ಲುಗಳನ್ನು ತಂದು ಕಾಮಗಾರಿ ನಿರ್ಮಿಸಲಾಗುತ್ತಿದ್ದು, ಅಧಿಕಾರಿಗಳ ಈ ನಡೆಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪಾಳೇಗಾರರು ನಿರ್ಮಿಸಿದ ಐತಿಹಾಸಿಕ ಕಲ್ಯಾಣಿ ಎಂದು ಹೇಳಲಾಗುತ್ತಿರುವ ಕಲ್ಯಾಣಿಯನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಕಾಮಗಾರಿಯನ್ನು ಆರಂಭಿಸಿದೆ. ನಿನ್ನೆಯಿಂದ ಸುಮಾರು ಮೂರು ಲೋಡು ಸೈಜು ಕಲ್ಲುಗಳನ್ನು ತಂದು ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಪಟ್ಟಣದ ಹೃದಯ ಭಾಗದಲ್ಲಿರುವ ಇದನ್ನು ಸಂಪೂರ್ಣವಾಗಿ ಮುಚ್ಚಿ ಅಭಿವೃದ್ಧಿಯ ಹೆಸರಿನಲ್ಲಿ ಸಣ್ಣ ಕಲ್ಯಾಣಿಯನ್ನು ನಿರ್ಮಿಸಲಾಗಿದೆ. ನೀರನ್ನು ಕೂಡ ಬಿಡಲಾಗಿದೆ. ಕಾಮಗಾರಿಯೂ ಕಳಪೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಐತಿಹಾಸಿಕ ಕಲ್ಯಾಣಿಯನ್ನೆ ಮುಚ್ಚಿ ತಮಗೆ ಬೇಕಾಗಿರುವ ಹಾಗೆ ಕಲ್ಯಾಣಿಯನ್ನು ನಿರ್ಮಿಸಿದ್ದು ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
PublicNext
13/09/2021 02:15 pm