ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ಸ್ಫೋಟ ಮಾಡಿದ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಿದೆ. ಖಡ್ಗ ಸಂಘಟನೆಯ ಪದಾಧಿಕಾರಿಗಳು ಸ್ಫೋಟ ನಡೆದ ಸ್ಥಳಕ್ಕೆ ತೆರಳಿ ರಸ್ತೆ ಅಗಲೀಕರಣ ಕಾಮಗಾರಿ ನಿಲ್ಲಿಸಿದ ಘಟನೆ ನಡೆದಿದೆ.
ಈ ವಿಚಾರ ಕೋರ್ಟ್ ನಲ್ಲಿದೆ. ಆದರೂ ಕಾಮಗಾರಿ ನಡೆಸುತ್ತಿರುವುದೇಕೆ ಎಂದು ಗುತ್ತಿಗೆದಾರರು ಹಾಗೂ ಕೆಲಸ ಮಾಡುತ್ತಿದ್ದ ಜೆಸಿಬಿಯನ್ನು ತಡೆದು ನಿಲ್ಲಿಸಿದ್ದು, ನಿಮ್ಮ ಕೆಲಸಕ್ಕೆ ನಾವು ಅಡ್ಡಿಪಡಿಸುತ್ತಿಲ್ಲ. ಇದು ನಮಗೆ ಅವಶ್ಯಕತೆಯೂ ಇಲ್ಲ. ಕೋರ್ಟ್ ನಿಂದ ಕಾಮಗಾರಿ ತಡೆಗೆ ತಡೆಯಾಜ್ಞೆ ತಂದಿದ್ದರೂ ಆತುರ ಆತುರವಾಗಿ ಕಾಮಗಾರಿ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಭಾರೀ ಸ್ಫೋಟಕ ಬಳಸಿ ಬ್ಲಾಸ್ಟ್ ಮಾಡಿರುವುದರಿಂದ ದೊಡ್ಡ ದೊಡ್ಡ ಕಲ್ಲುಗಳು ಚೂರು ಚೂರು ಆಗಿವೆ. ಮುಟ್ಟಿದರೆ ಸಾಕು ಮಣ್ಣು ಕುಸಿಯುತ್ತಿದೆ. ಸಣ್ಣ ಕಾಮಗಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹಾನಿ ಮಾಡುವ ಔಚಿತ್ಯವಾದರೂ ಏನಿತ್ತು ಎಂದು ಖಡ್ಗ ಸಂಘಟನೆ ಮುಖಂಡರು ಪ್ರಶ್ನಿಸಿದ್ದಾರೆ.
ದಿನೇ ದಿನೇ ಮಣ್ಣು ಕುಸಿಯುತ್ತಿರುವಯದರಿಂದ ಆತಂಕವೂ ಹೆಚ್ಚಾಗುತ್ತಿದೆ. ಸೂಳೆಕೆರೆ ದಂಡೆ ಮೇಲಿರುವ ಗಿಡಗಳ ಮೇಲೆ ಕಲ್ಲು ಹಾಕಿದ್ದಾರೆ. ಇಂಜಿನಿಯರ್ ಶಿವಕುಮಾರ್ ಗಮನಕ್ಕೆ ತನ್ನಿ. ಬಳಿಕ ಕೆಲಸ ಮಾಡಿ. ಅದನ್ನು ಬಿಟ್ಟು ರಸ್ತೆ ಅಗಲೀಕರಣ ನೆಪವಾಗಿಟ್ಟುಕೊಂಡು ಇಂತ ಆತಂಕ ಸೃಷ್ಟಿಸಿದ್ದು, ಜನರು ಸಂಚರಿಸಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಪ್ರಮಾಣದಲ್ಲಿ ಮಣ್ಣು ಜಾರಿ ಅನಾಹುತವಾದರೆ ಯಾರು ಹೊಣೆ ಎಂದು ಖಡ್ಗ ಸಂಘಟನೆಯ ಪ್ರಮುಖ ರಘು ಪ್ರಶ್ನಿಸಿದ್ದಾರೆ.
PublicNext
08/08/2021 01:25 pm