ಕೊಳ್ಳುರು ಬ್ರಿಡ್ಜ್ ಸಂಪೂರ್ಣ ಜಲಾವೃತ, ಸೇತುವೆ ಕಡೆ ತೆರಳದಂತೆ ಎಸ್ ಪಿ ಸೂಚನೆ.!

ಯಾದಗಿರಿ: ಕಳೆದ ಎರ್ಡಮೂರು ದಿನಗಳಿಂದ ಸುರಿಯುತ್ತಿರೋ ಭಾರಿ ಮಳೆಯಿಂದ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಶಹಪೂರ-ಮಂತ್ರಾಲಯ ರಸ್ತೆಯ ಮಾರ್ಗಮಧ್ಯೆ ಇರೋ ಕೋಳ್ಳುರು ಬ್ರಿಡ್ಜ್ ಸಂಪೂರ್ಣ ಜಲಾವೃತವಾಗಿದೆ.
ಅಲ್ಲದೇ ಸೇತುವೆ ಹಾಗೂ ನದಿ ಸುತ್ತಲಿನ ರೈತರ ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಸೇತುವೆ ಎರಡು ಕಡೆ ಬ್ಯಾರೆಕೆಡ್ಸ್ ಹಾಕಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಾರ್ಜನಿಕರು ತಾವು ಮತ್ತು ತಮ್ಮ ಜಾನುವಾರುಗಳು ಬ್ರಿಡ್ಜ್ ಕಡೆಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಯಾದಗಿರಿ ಎಸ್ಪಿ ಡಾ. ಸಿಬಿ ವೇದಮೂರ್ತಿ ಅವರು ಸೂಚಿಸಿದ್ದಾರೆ.

ಅಲ್ಲದೇ ರಾಯಚೂರು ಕಡೆಗೆ ಪ್ರಯಾಣಿಸುವ ಸಾರ್ವಜನಿಕರು ತಿಂಥಣಿ ಬ್ರಿಡ್ಜ್ ಮೂಲಕ ಪ್ರಯಾಣಿಸಲು ಕೋರಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.
-----

ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Public News

Public News

2 months ago

Cinque Terre

13.72 K

Cinque Terre

0