ಯಾದಗಿರಿ: ರಸ್ತೆ ದುರಸ್ತಿ ಮಾಡ್ರಿ ಸ್ವಾಮಿ, ತಿರುಗಾಡೋಕ್ ಬಾಳ ಕಷ್ಟ ಆಗೇತಿ.!

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಹಳ್ಳಿಯಿಂದ ಹುಣಸಗಿಯ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ.

ಮಳೆರಾಯನ ಅವಾಂತರಕ್ಕೆ ಎಲ್ಲೆಂದರಲ್ಲಿ ತೆಗ್ಗು ಗುಂಡಿಗಳು ಬಿದ್ದಿದ್ದು, ದಾರಿ ಮಧ್ಯೆ ಅರ್ಧದಷ್ಟು ರಸ್ತೆ ಮುರಿದು ಬಿದ್ದಿದೆ. ಅಲ್ಲದೇ ಅಲ್ಲಲ್ಲಿ ಕೆಸರು ಗದ್ದೆಯಂತಾಗಿದ್ದು, ಸುಮಾರು 15 ಕಿಲೋಮೀಟರ್ ರಸ್ತೆ ಹದಗೆಟ್ಟು ಹೋಗಿದೆ. ರೈತರು ಜಮೀನುಗಳಿಗೆ ತೆರಳಲು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ರಸ್ತೆ ಕೆಟ್ಟು ಎರ್ಡ್ಮೂರು ವರ್ಷಗಳು ಕಳೆದು ಹೋಗಿದೆ. ಅಲ್ಲದೇ ಇತ್ತೀಚಿಗೆ ಮಳೆ ಸುರಿಯುತ್ತಿದ್ದರಿಂದ ಈ ಒಳ ರಸ್ತೆಗೆ ಅಂಟಿಕೊಂಡಿರೋ ಹೆಬ್ಬಾಳ ಬಿ. ಕಲ್ಲದೇವನಹಳ್ಳಿ, ಚನ್ನೂರ್, ವಜ್ಜಲ್ ಗ್ರಾಮದ ರೈತರು ನಿತ್ಯ ಹೊಲ ಗದ್ದೆಗಳಿಗೆ ಓಡಾಡುವವರು ನರಕಯಾತನೆ ಅನುಭವಿಸುತ್ತಿದ್ದಾರೆ.

ಇನ್ನು ಸುರಪುರ ತಾಲ್ಲೂಕಿನಾದ್ಯಂತ ಕೆಲ ಹಳ್ಳಿಗಳಲ್ಲಿ ಇಂಥ ಹದಗೆಟ್ಟ ರಸ್ತೆಗಳು ದುರಸ್ತಿ ಆಗಿಲ್ಲ ಅಲ್ಲದೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಂಡರೂ ಕಾಣದಂತೆ ಕುಳಿತಿದ್ದು, ಜನರು ಇಡೀ ಶಾಪ ಹಾಕುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಟ್ರಾಕ್ಟರ್ ಕೂಡಲೇ ಈ ರಸ್ತೆ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಮೌನೇಶ ಬಿ. ಮಂಗಿಹಾಳ,
ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Public News

Public News

2 months ago

Cinque Terre

26.08 K

Cinque Terre

1

  • Rajesh
    Rajesh

    ede sulibele helida chinnada rasthe agirbahudu. 🤔