ಬೆಂಗಳೂರು: ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಕಾವೇರಿ ಬ್ರಾಂಡ್ ಹೆಸರಿನಲ್ಲಿ ಈಗ ರಾಮನಗರ ಜಿಲ್ಲೆಯ ಪ್ರಸಿದ್ಧ ಚನ್ನಪಟ್ಟಣ ಆಟಿಕೆಗಳಿಂದ ಹಿಡಿದು ಬೀದರ್ ನ ಬಿದರಿ ಕಲೆ ಸಾಮಗ್ರಿಗಳವರೆಗೆ , 100 ಕ್ಕೂ ಹೆಚ್ಚು ಕರಕುಶಲ ವಸ್ತುಗಳು ಲಭ್ಯ!
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್ ಎಚ್ ಡಿಸಿ) ಫ್ಲಿಪ್ ಕಾರ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅಮೆಜಾನ್ ನೊಂದಿಗೆ ಸಹ ಒಪ್ಪಂದಕ್ಕೆ ಸಹಿ ಹಾಕಲು ಯೋಜಿಸುತ್ತಿದೆ.
ಕೆತ್ತಿದ ಮರದ ಫ್ರೇಮ್ ಗಳು, ವಾಲ್ ಹ್ಯಾಂಗಿಂಗ್ಸ್, ಶ್ರೀಗಂಧದ ಪೀಸ್ ಗಳು, ಬಿದರಿಕಲಾಕೃತಿಗಳು, ಚನ್ನಪಟ್ಟಣಮರದ ಆಟಿಕೆಗಳು, ಸಣ್ಣ ವಿಗ್ರಹಗಳು, ಹತ್ತಿ ರಗ್ಗುಗಳು, ರೋಸ್ ವುಡ್ ಮತ್ತು ಶ್ರೀಗಂಧದ ಉತ್ಪನ್ನಗಳನ್ನು ಒಳಗೊಂಡಂತೆ ಹಿತ್ತಾಳೆ ಮತ್ತು ಕಂಚಿ ವಸ್ತುಗಳು ಫ್ಲಿಪ್ ಕಾರ್ಟ್ ನಲ್ಲಿ ಕಾವೇರಿ ಕರಕುಶಲ ಬ್ರಾಂಡ್ ಅಡಿಯಲ್ಲಿ ಲಭ್ಯವಿರುತ್ತವೆ.
ಐಜಿಪಿ ಮತ್ತು ಕೆಎಸ್ ಎಚ್ ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಡಿ ರೂಪಾ ಅವರು ಮಾತನಾಡುತ್ತಾ, ಕೆಲವು ದಿನಗಳ ಹಿಂದೆ ಒಪ್ಪಂದಕ್ಕೆ ಸಹಿ ಹಾಕಲಾಯಿತೆಂದು ಮಾಹಿತಿ ನೀಡಿದ್ದಾರೆ. ಇ-ಕಾಮರ್ಸ್ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ಹೆಚ್ಚು ಜನ ಆನ್ ಲೈನ್ ಖರೀದಿಗಳನ್ನು ಇಷ್ಟಪಡುತ್ತಿದ್ದಾರೆ.ವಿಶೇಷವಾಗಿ ಸಾಂಕ್ರಾಮಿಕ ರೋಗದ ನಂತರ ಈ ಬೆಳವಣಿಗೆ ಕಂಡುಬಂದಿದೆ ಎಂದ ರೂಪಾ. "ಇ-ಕಾಮರ್ಸ್ ಕ್ಷೇತ್ರಕ್ಕೆ ಪ್ರವೇಶಿಸುವ ಮೂಲಕ, ನಮ್ಮ ವ್ಯವಹಾರವನ್ನು ವಿಸ್ತರಿಸಲು ನಾವು ಆಶಿಸುತ್ತಿದ್ದೇವೆ," ಎಂದರು.
PublicNext
28/02/2021 09:24 am