ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! ILO ವರದಿ

ಹೊಸದಿಲ್ಲಿ: ಭಾರತ ಇನ್ನು ಅಭಿವೃದ್ಧಿಶೀಲ ದೇಶವಾಗಿ ಉಳಿಯಲು ಸಾಕಷ್ಟು ಕಾರಣಗಳಿವೆ. ಇಲ್ಲಿ ಹೆರಳವಾಗಿರುವ ಮಾನವ ಸಂಪತ್ತಿನ ಸರಿಯಾದ ಬಳಕೆಯಾಗುತ್ತಿಲ್ಲ. ಜಗತ್ತಿನ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೆಲಸದ ಅವಧಿ ಗರಿಷ್ಠ ಪ್ರಮಾಣದಲ್ಲಿದೆ. . ಕಾರ್ಯಾವಧಿ ನಡುವೆ ವಿರಾಮದ ಅವಧಿಯೂ ಅಲ್ಪ, ಕನಿಷ್ಠ ವೇತನದ ಪ್ರಮಾಣವೂ ಕಡಿಮೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್ ಒ) ವರದಿಯಲ್ಲಿ ಹೇಳಲಾಗಿದೆ.

2020-21ರ ಅವಧಿಯಲ್ಲಿ ಜಗತ್ತಿನ ಯಾವ ದೇಶಗಳಲ್ಲಿ, ನೌಕರರ ಪರಿಸ್ಥಿತಿ ಹೇಗಿದೆ ಎಂಬುದನ್ನು ಅಧ್ಯಯನ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ವಾರಕ್ಕೆ ಕೆಲಸದ ಅವಧಿಯನ್ನು 48 ಗಂಟೆಗಳವರೆಗೆ ವಿಸ್ತರಿಸಬಹುದು. ಈ ದೇಶಕ್ಕೆ ಹೋಲಿಸಿದರೆ ಮಾಲ್ಡೀವ್ಸ್, ಕತಾರ್, ಮಂಗೋಲಿಯ, ಜಾಂಬಿಯ ದೇಶಗಳಲ್ಲಿ ಮಾತ್ರ ಕೆಲಸದ ಅವಧಿ ಜಾಸ್ತಿಯಿದೆ ಎಂದು ಐಎಲ್ ಒ ವರದಿಯಲ್ಲಿ ಹೇಳಲಾಗಿದೆ.

ಗ್ರಾಮೀಣ ಮತ್ತು ನಗರ ಭಾಗಗಳೆರಡಲ್ಲೂ ಪುರುಷರು ಮಹಿಳೆಯರಿಗಿಂತ ದೀರ್ಘಾವಧಿ ದುಡಿಯುತ್ತಾರೆ. ಇಬ್ಬರನ್ನೂ ಪರಿಗಣಿಸಿದರೆ ನಗರಪ್ರದೇಶದಲ್ಲಿ ಕೆಲಸದ ಅವಧಿ ಜಾಸ್ತಿ ಎಂದು ಐಎಲ್ ಒ ವರದಿಯಲ್ಲಿ ಹೇಳಲಾಗಿದೆ. ಬೇರೆ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ?: ಚೀನದಲ್ಲಿ ವ್ಯಕ್ತಿಯೊಬ್ಬ ವಾರದಲ್ಲಿ ಸರಾಸರಿ 46 ಗಂಟೆಗಳ ಕಾಲ ದುಡಿಯುತ್ತಾನೆ. ಅಮೆರಿಕದಲ್ಲಿ 37 ಗಂಟೆ, ಇಂಗ್ಲೆಂಡ್ ಮತ್ತು ಇಸ್ರೇಲ್ನಲ್ಲಿ 36 ಗಂಟೆಗಳ ಕಾಲ ದುಡಿಯುತ್ತಾನೆ.

Edited By : Nirmala Aralikatti
PublicNext

PublicNext

28/02/2021 07:45 am

Cinque Terre

40.25 K

Cinque Terre

1