ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೋಳರ ಜಲನಿರ್ವಹಣೆ ಈ ಅಧಿಕಾರಿಗೆ ಪ್ರೇರಣೆ : 178 ಕೆರೆ ಕಟ್ಟೆಗಳಿಗೆ ಮರುಜೀವ

ಚೆನ್ನೈ : ಅಧಿಕಾರಿಗಳೆಂದರೆ ಕೇವಲ ಸರಕಾರದ ಆದೇಶ ಪಾಲಿಸುವವರಲ್ಲ, ತಲೆಗ್ಗಿಸಿ ಫೈಲುಗಳಿಗೆ ಸಹಿ ಹಾಕುವುದಲ್ಲ, ಅವರಿಗೂ ಸಾಮಾಜಿಕ ಜವಾಬ್ದಾರಿಗಳಿವೆ ಎಂಬುದನ್ನು ತೋರಿಸಬೇಕು. ಹೊಸ ಹೊಸ ಆಲೋಚನೆಗಳನ್ನು ಹರಿಬಿಡಬೇಕು, ರಚನಾತ್ಮಕ ಕಾರ್ಯಗಳಲ್ಲಿ ಜನರನ್ನು ತೊಡಿಗಿಸುವ ಯೋಜನೆ ರೂಪಿಸಬೇಕು. ನಮ್ಮ ಪ್ರಾಚೀನ ಜಲನಿರ್ವಹಣೆ, ಸಂಗ್ರಹಣೆ ತಂತ್ರಜ್ಞಾನ ಇಂದಿಗೂ ಪ್ರಸ್ತುತ. ಅವುಗಳನ್ನು ನೋಡುವ ಒಳಗಣ್ಣು ಬೇಕು ಪರಾಮರ್ಶಿಸುವ ತಾಳ್ಮೆ ನಮ್ಮ ಅಧಿಕಾರಿಗಳಲ್ಲಿರಬೇಕು.

ಚೋಳರ ಕಾಲದ ಜಲಮೂಲಗಳನ್ನ ಪುನರುಜ್ಜೀವನಗೊಳಿಸಿ, ಜಲಕ್ಷಾಮದಿಂದ ಬಳಲುತ್ತಿದ್ದ ತಮಿಳ್ನಾಡಿನ ಅನೇಕ ಗ್ರಾಮಗಳನ್ನು ನಂದನ ವನವನ್ನಾಗಿ ಮಾಡಿದ ತಮಿಳ್ನಾಡಿನ ಯುವ ಉತ್ಸಾಹಿ ಐಎಎಸ್ ಅಧಿಕಾರಿ ವಿಕ್ರಾಂತ್ ರಾಜಾ ಅವರ ಸಾಹಸ ಗಾಥೆ ಇದು.

ವ್ಯರ್ಥವಾಗಿ ಸಮುದ್ರ ಸೇರುತ್ತಿದ್ದ ಮಳೆ ನೀರನ್ನು ಕಾಲುವೆ ಹಾಗೂ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸುವ ಇವರ ನಿಜಕ್ಕೂ ಮಾದರಿ. ಪ್ರಾಚೀನ ಕಾಲದ ತಂತ್ರಜ್ಞಾನಗಳು ಆಧುನಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಲ್ಲವು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

2019 ರಲ್ಲಿ ಪುದುಚೇರಿಯ ಬಹುತೇಕ ಜಿಲ್ಲೆಗಳು ಜಲಕ್ಷಾಮದಿಂದ ಬಳಲುತ್ತಿದ್ದವು. ಅದರಲ್ಲೂ ಕರೈಕಲ್ ಜಿಲ್ಲೆಯ ಜನ ಹಾಗೂ ರೈತರು ಬೊಗಸೆ ನೀರಿಗೂ ಬಾಯಿ ಬಿಡುವಂತಾಗಿತ್ತು. ಬಕೆಟ್ ನೀರಿಗಾಗಿ ಕಿಲೋಮೀಟರ ಗಟ್ಟಲೇ ಅಲೆಯಬೇಕಾಗಿತ್ತು. ನೀರಾವರಿ ಇಲ್ಲದ ಕಾರಣ ಗ್ರಾಮಗಳ ಕೇವಲ ಅರ್ಧದಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದವು. ಅಂತರ್ ಜಲ 200 - 300 ಅಡಿ ಕೆಳಗೆ ಹೋಗಿದ್ದರಿಂದ ಕೊಳವೆ ಬಾವಿಗಳು ಒಣಗಿ ನಿಂತಿದ್ದವು.

ಆಗ ಭಗೀರಥನಂತೆ ಬಂದವರು ಜಿಲ್ಲಾಧಿಕಾರಿ ವಿಕ್ರಾಂತ್ ರಾಜಾ. 9 ನೇ ಶತಮಾನದ ಚೋಳರು ಅಳವಡಿಕೊಂಡಿದ್ದ ಜಲಯೋಜನೆಗಳು ರಾಜಾ ಅವರನ್ನು ಪ್ರರೇಪಿಸಿದವು. " ನಮ್ ನೀರ್ '' ಎಂಬ ಯೋಜನೆ ಮೂಲಕ ಕರೈಕಲ್ ಜಿಲ್ಲೆಯ ಕಲುಷಿಯತ 450 ಹೊಂಡ ಕೆರೆ, ಬಾವಿಗಳನ್ನು ಗುರುತಿಸಿದರು. ಸ್ಥಳೀಯರು, ಸರಕಾರದ ವಿವಿಧ ಇಲಾಖೆಗಳು, ಶೈಕ್ಷಣಿಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೇವಲ ಮೂರು ತಿಂಗಳಲ್ಲಿ 178 ಜಲ ಮೂಲಗಳ ಹೂಳೆತ್ತಿಸಿದರು.

ಚೋಳರ ಆಡಳಿತದಲ್ಲಿ ಸುಮಾರು 400 ಕ್ಕೂ ಹೆಚ್ಚು ಜಲಾಶಗಳು ಭರ್ತಿಯಾಗಿ ಆ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿತ್ತಂತೆ. ಅವರ ಜಲ ನಿರ್ವಹಣೆ ಜ್ಞಾನ ಎಷ್ಟಿತ್ತೆಂದರೆ ಕಾವೇರಿ ನದಿಯಿಂದ ಉಂಟಾಗುವ ಪ್ರವಾಹದ ಹೆಚ್ಚುವರಿ ನೀರು ಹೊಲಗಳಿಗೆ ಹರಿಯುಂತೆ ವ್ಯವಸ್ಥೆ ಮಾಡಿದ್ದರಂತೆ. ಚೋಳರ ಇಂಜನೀಯರುಗಳು ಸಮರ್ಪಕ ಕಾಲುವೆ ಹಾಗೂ ಹೊಂಡಗಳ ಮೂಲಕ ಮಳೆ ನೀರು ಸಂಗ್ರಹಿಸುವ ಯೋಜನೆ ರೂಪಿಸಿದ್ದರು.

ಜಿಲ್ಲಾಧಿಕಾರಿ ತಾವು ಶಾಲೆಯಲ್ಲಿ ಓದುತ್ತಿರುವಾಗಲೇ ಈ ವಿಷಯವನ್ನು ಅರಿತುಕೊಂಡಿದ್ದರಂತೆ.'' ಅಕ್ಕಿ ಕಣಜ " ಎಂದೇ ಖ್ಯಾತಿ ಪಡೆದಿರುವ ಕರೈಕಲ್ ಜಿಲ್ಲೆಯು ಒಂದು ಕಾಲದಲ್ಲಿ ಜಲಸಮೃದ್ಧಿಯಾಗಿತ್ತು ಎಂದು ಓದಿದ್ದೆ. ಅದೇ ಇಂದು ನನಗೆ ಪ್ರೇರಣೆಯಾಯಿತು.

ನೀರು ಸಂಗ್ರಹಣೆಯಿಂದ ಅಂತರ್ ಜಲ ಮಟ್ಟ ಹೆಚ್ಚಾಗಿ ಕೊಳವೆ ಬಾವಿಗಳು ತುಂಬಿ ಹರಿಯತೊಡಗಿವೆ. ಸಿಎಸ್ ಆರ್ ನೆರವಿನಿಂದ 20 ಹೊಂಡಗಳ ನಿರ್ಮಾಣ ಹಾಗೂ 80 ಕಿಮಿ ಕಾಲುವೆ ಹೂಳೆತ್ತುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳುತ್ತಾರೆ ರಾಜಾ.

ನೆಚ್ಚಿನ ಸಿನೆಮಾ ನಟರ, ಕುಟುಂಬದ ಸದಸ್ಯರ ಅಥವಾ ಸ್ನೇಹಿತರ ಜನ್ಮ ದಿನಕ್ಕೆ ಹಣ ವೆಚ್ಚ ಮಾಡುವ ಬದಲು ಅವರ ಹೆಸರಲ್ಲಿ ಒಂದು ಹೊಂಡ ನಿರ್ಮಾಣಕ್ಕೆ ಅದೇ ಹಣವನ್ನು ಬಳಸಿ ಎಂದು ಅಭಿಮಾನಿಗಳನ್ನು ಪ್ರರೇಪಿಸಲಾಗುತ್ತಿದೆ. ಈ ಯೋಜನೆ ಭಾರಿ ಬೆಂಬಲ ದೊರೆಯುತ್ತಿದೆ ಎನ್ನುತ್ತಾರೆ.

Edited By :
PublicNext

PublicNext

22/02/2021 03:31 pm

Cinque Terre

41.86 K

Cinque Terre

2