ದಾವಣಗೆರೆ: ಪಾಲಿಕೆ ಮೇಯರ್ ಅಂದಾಕ್ಷಣ ಎಲ್ಲರೂ ಗೌರವ ಕೊಡುತ್ತಾರೆ. ಆ ಹುದ್ದೆಗೆ ಅಂಥ ಕಿಮ್ಮತ್ತಿದೆ. ಆದ್ರೆ ಬೆಣ್ಣೆನಗರಿಯ ಮೇಯರ್ ಮಾಡಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಪಾಲಿಕೆಯ ವತಿಯಿಂದ ಮನೆ ಮನೆ ಬಾಗಿಲಿಗೆ ಪಾಲಿಕೆ ಎಂಬ ವಿಶಿಷ್ಟ, ವಿಭಿನ್ನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಅಭಿಯಾನದ ಉದ್ದೇಶ ಜನರ ಬಳಿಗೆ ಹೋಗಿ ಸಮಸ್ಯೆ ಪರಿಹರಿಸಬೇಕೆಂಬುದು. ಇಂತಹ ಕಾರ್ಯಕ್ರಮ ಅನುಷ್ಠಾನಗೊಳಿಸುವ ಮೂಲಕ ಜನಪ್ರಿಯ ಮೇಯರ್ ಎಂದೇ ಖ್ಯಾತಿ ಗಳಿಸಿರುವ ಬಿ. ಜಿ. ಅಜಯ್ ಕುಮಾರ್ ಈಗ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 22ನೇ ವಾರ್ಡ್ ಯಲ್ಲಮ್ಮ ನಗರದಲ್ಲಿ ಸ್ಚಚ್ಚತಾ ಕಾರ್ಯಕ್ರಮ ನಡೆಯುತಿತ್ತು. ಈ ವೇಳೆ ಕಾರಿನಲ್ಲಿ ತೆರಳುತ್ತಿದ್ದ ಅಜಯ್ ಕುಮಾರ್ ಕೂಡಲೇ ಕಾರಿನಿಂದ ಇಳಿದರು.
ಕಾಮಗಾರಿ ವೀಕ್ಷಣೆಗೆ ಬಂದರು. ಆಗ ಸ್ವತಃ ಮಹಾಪೌರರಾದ ಬಿ.ಜಿ.ಅಜಯ್ ಕುಮಾರ್ ರವರು, ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದ ಪೌರ ಕಾರ್ಮಿಕರ ಕುಶಲೋಪರಿ ವಿಚಾರಿಸಿದರು. ಜೊತೆಗೆ ಪೌರ ಕಾರ್ಮಿಕರಿಗೆ ಪ್ರೋತ್ಸಾಹಿಸಲು ಸ್ವತಃ ತಾವೇ ಚರಂಡಿಗಳಿಗೆ ಇಳಿದು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದರು. ಇದು ಸ್ಥಳದಲ್ಲಿದ್ದವರ ಹುಬ್ಬೇರುವಂತೆ ಮಾಡಿತು. ತಾನು ಮೇಯರ್ ಎನ್ನುವ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಚರಂಡಿಗಿಳಿದು ತ್ಯಾಜ್ಯ ತೆಗೆದು ಹಾಕಿದ್ದು ಎಲ್ಲರನ್ನು ಬೆರಗುಗೊಳಿಸಿತು.
PublicNext
14/02/2021 10:50 pm