ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿರುವ ಕಾರು ಮಾಲೀಕರಿಗೆ ಶಾಕಿಂಗ್ ಸುದ್ದಿ. ಇನ್ನು ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ. ಬೆಂಗಳೂರಿನಲ್ಲಿ ಪರಿಷ್ಕೃತ ಪಾರ್ಕಿಂಗ್ ನೀತಿ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬಿಬಿಎಂಪಿಗೆ ಅನುಮೋದನೆ ನೀಡಿದೆ. ಬೆಂಗಳೂರು ರಸ್ತೆ ಸಾರಿಗೆ ನಿರ್ದೇಶನಾಲಯ ಈ ನೀತಿ ಸಿದ್ದಪಡಿಸಿದೆ.
ಹೊಸ ಪಾರ್ಕಿಂಗ್ ನೀತಿ ಪ್ರಸ್ತಾಪಗಳು ಹೀಗಿವೆ:
1. ಬೆಂಗಳೂರಿನಲ್ಲಿ ಇನ್ನು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ.
2. ಮನೆ ಮುಂದೆ ವಾಹನ ಪಾರ್ಕಿಂಗ್ ಗೆ ಅನುಮತಿ ಕಡ್ಡಾಯ
3. ವಾಹನ ಪಾರ್ಕಿಂಗ್ ಗೆ ಅನುಮತಿ ಪಡೆಯಲು ನಿರ್ದಿಷ್ಟ ಶುಲ್ಕ ಪಾವತಿಸಬೇಕು
4. ಸಣ್ಣ ವಾಹನಗಳಿಗೆ ವಾರ್ಷಿಕ 1000 ರೂಪಾಯಿ. ಮಧ್ಯಮ ಗಾತ್ರದ ಕಾರಿಗೆ ವಾರ್ಷಿಕ 3 ರಿಂದ 4 ಸಾವಿರ ರೂಪಾಯಿ, ಎಂಯುವಿ, ಎಸ್ಯುವಿ ಕಾರುಗಳಿಗೆ 5 ಸಾವಿರ ನಿಗದಿಪಡಿಸಲಾಗಿದೆ.
5. ವಾಹನಕ್ಕೆ ಪರ್ಮಿಟ್ ಪಡೆಯುವಾಗ ಈ ಶುಲ್ಕ ಪಾವತಿ ಮಾಡಬೇಕು 6. ಸ್ಥಳ ಮತ್ತು ಸಮಯಕ್ಕೆ ತಕ್ಕಂತೆ ಪಾರ್ಕಿಂಗ್ ದರ ನಿಗದಿಯಾಗಲಿದೆ. ಪಾರ್ಕಿಂಗ್ ವಿಚಾರದಲ್ಲಿ ಈ ಎಲ್ಲಾ ಬದಲಾವಣೆ ಮಾಡಲು ಯೋಜನೆ ರೂಪಿತವಾಗಿದ್ದು, ಸದ್ಯದಲ್ಲೇ ಬಿಬಿಎಂಪಿ ಅದನ್ನು ಅನುಷ್ಠಾನಕ್ಕೆ ತರುವ ಸಾಧ್ಯತೆಗಳಿವೆ.
2020ರ ವಾಹನ ನೊಂದಣಿ ಅಂಕಿಅಂಶಗಳ ಪ್ರಕಾರ ಬೆಂಗಳೂರಿನಲ್ಲಿರುವ ವಾಹನಗಳ ಸಂಖ್ಯೆ 94 ಲಕ್ಷ ದಾಟಿದೆ. ವರ್ಷಕ್ಕೆ ಶೇಕಡಾ 10 ರಷ್ಟು ರಿಜಿಸ್ಟ್ರೇಶನ್ ಏರಿಕೆಯಾಗುತ್ತಿದೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ವಿಪರೀತ ಹೆಚ್ಚಾಗಿದೆ. ಫ್ಲೈಓವರ್, ಮೆಟ್ರೊ ಬಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಸರ್ಕಾರ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿದೆ.
PublicNext
12/02/2021 07:44 am