ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ಕಿ.ಮೀ. ಒಳಗೆ ಸಿಲಿಂಡರ್ ಡೋರ್ ಡೆಲೆವರಿ ಪ್ರಿ..

ಚಿಕ್ಕಬಳ್ಳಾಪುರ: ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳದಿಂದ ಅಡುಗೆ ಮನೆ ದುಬಾರಿಯಾಗುತ್ತಿದ್ದರೆ, ಮತ್ತೂಂದೆಡೆ ಸಿಲಿಂಡರ್ ಸಾಗಾಣಿಕೆ (ಡೋರ್ ಡಿಲೆವರಿ) ಶುಲ್ಕ ವಸೂಲಿ ಜೋರಾಗಿದೆ.

ಇದು ಗ್ರಾಹಕರಿಗೆ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವ್ಯಾಪ್ತಿಗೆ ಒಳಪಡುವ ಗ್ಯಾಸ್ ಏಜೆನ್ಸಿಗಳು ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಏಜೆನ್ಸಿಗಳ ಸಿಬ್ಬಂದಿ ಅಕ್ರಮವಾಗಿ ಸಿಲಿಂಡರ್ ಬಳಕೆದಾರರಿಂದ ಹಣ ಕೀಳುತ್ತಿದ್ದಾರೆ.

ಸರ್ಕಾರದ ಆದೇಶದಂತೆ 5 ಕಿಲೋಮೀಟರ್ ವ್ಯಾಪ್ತಿಯವರೆಗೂ ಅಡುಗೆ ಅನಿಲ ಸಿಲಿಂಡರ್ ಸರಬರಾಜು ಶುಲ್ಕ ನೀಡುವ ಅಗತ್ಯವಿಲ್ಲ. ಈ ವ್ಯಾಪ್ತಿಯ ನಂತರ ಒಂದು ಸಿಲಿಂಡರ್ ಸರಬರಾಜು ಮಾಡಲು ಪ್ರತಿ ಕಿಲೋಮೀಟರ್ಗೆ ₹ 1.60ನಂತೆ ಪಾವತಿಸಬೇಕಿದೆ.

ಗ್ರಾಹಕರ ಮನೆಗೆ ಗ್ಯಾಸ್ ಸಿಲಿಂಡರ್ ತಲುಪಿಸುವುದು ಅಡುಗೆ ಅನಿಲ ವಿತರಕರ ಜವಾಬ್ದಾರಿ. ಗ್ರಾಹಕರ ಮನೆಯು ಯಾವುದೇ ಮಹಡಿಯಲ್ಲಿದ್ದರೂ ಉಚಿತವಾಗಿ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡಬೇಕಿದೆ. ಸಿಲಿಂಡರ್ ತಂದು ಕೊಡುವ ವ್ಯಕ್ತಿಯು ಬಿಲ್ ಗಿಂತಲೂ ಹೆಚ್ಚಿನ ಹಣ ಕೇಳಿದರೆ ಗ್ರಾಹಕರು ನಿರಾಕರಿಸಬೇಕು. ಇದು ಎಲ್ಲಾ ಗ್ಯಾಸ್ ಕಂಪನಿಗಳ ಗ್ರಾಹಕರಿಗೂ ಅನ್ವಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್. ಲತಾ ತಿಳಿಸಿದ್ದಾರೆ.

ಬಿಲ್ ಗಿಂತಲೂ ಹೆಚ್ಚಿನ ಹಣ ಪಾವತಿಸಲು ಒತ್ತಾಯ ಮಾಡಿದರೆ ಸಂಬಂಧಪಟ್ಟ ಗ್ಯಾಸ್ ಏಜೆನ್ಸಿ, ತಾಲ್ಲೂಕು ಕಚೇರಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

07/02/2021 11:29 am

Cinque Terre

50.45 K

Cinque Terre

9

ಸಂಬಂಧಿತ ಸುದ್ದಿ