ನವದೆಹಲಿ : ನೀತಿ ಆಯೋಗ ಎರಡನೇ ನಾವೀನ್ಯ ಸೂಚ್ಯಂಕವನ್ನು ಬಿಡುಗಡೆಗೊಳಿಸಿದ್ದು, ಸತತ ಎರಡನೇ ವರ್ಷವೂ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ಕೇರಳ ಇದೆ.
ಜಾಗತಿಕ ನಾವೀನ್ಯ ಸೂಚ್ಯಂಕದ ಆಧಾರದಲ್ಲಿ ಅಭಿವೃದ್ಧಿಪಡಿಸಿರುವ ಈ ಸೂಚ್ಯಂಕವನ್ನು ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹಾಗೂ ಸಿಇಒ ಅಮಿತಾಬ್ ಕಾಂತ್ ಬಿಡುಗಡೆಗೊಳಿಸಿದರು.
ಜಾರ್ಖಂಡ್, ಛತ್ತೀಸಗಡ ಹಾಗೂ ಬಿಹಾರ ಸೂಚ್ಯಂಕದದಲ್ಲಿ ಕೊನೆಯ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿ ಮೊದಲ ಸ್ಥಾನ ಪಡೆದಿದ್ದು, ಈಶಾನ್ಯ ರಾಷ್ಟ್ರಗಳ ವಿಭಾಗದಲ್ಲಿ ಹಿಮಾಚಲ ಪ್ರದೇಶವು ಪ್ರಥಮ ಸ್ಥಾನದಲ್ಲಿದೆ.
PublicNext
20/01/2021 10:43 pm