ಅಹಮದಾಬಾದ್: ದೇಶದ 27 ನಗರಗಳಿಗೆ ಒಂದು ಸಾವಿರ ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅಹಮದಾಬಾದ್ ಮೆಟ್ರೊ ರೈಲು ಯೋಜನೆಯ ಎರಡನೇ ಹಂತದ ಮತ್ತು ಸೂರತ್ ಮೆಟ್ರೊ ರೈಲು ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಮೆಟ್ರೊ ರೈಲು ಯೋಜನೆ ಬಗ್ಗೆ ಆಧುನಿಕವಾಗಿ ಯೋಚಿಸದ, ಯೋಜನೆ ಹೊಂದಿರದ ದಿನಗಳಿದ್ದವು. ಇದರಿಂದಾಗಿ ವಿವಿಧ ಮೆಟ್ರೊ ನಗರಗಳಲ್ಲಿ ವಿವಿಧ ರೀತಿಯಲ್ಲಿ ಮೆಟ್ರೊ ರೈಲು ಸಂಪರ್ಕ ಜಾಲ ಸೃಷ್ಟಿಯಾಯಿತು. ಅಹಮದಾಬಾದ್ ನ ಮತ್ತು ಸೂರತ್ ನ ಮೆಟ್ರೊ ಸಂಪರ್ಕ ಜಾಲವು ದೇಶದ ಎರಡು ಪ್ರಮುಖ ಉದ್ಯಮ ಕೇಂದ್ರದ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಕೇಂದ್ರ ಸರ್ಕಾರ ಆಂತರಿಕ ನಗರ ಸಂಚಾರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
PublicNext
18/01/2021 06:04 pm