ಬೆಂಗಳೂರು: ವಿದ್ಯುತ್ ದರ ಹೆಚ್ಚಳ, ನೀರಿನ ಕರ ಏರಿಕೆ ಗಾಯಕ್ಕೆ ಈಗ ಸರಕಾರದಿಂದ ಆಸ್ತಿ ತೆರಿಗೆ ಹೆಚ್ಚಳದ ಬರೆ. ವ್ಹಾ... ಮುಖ್ಯಮಂತ್ರಿ ಯಡಿಯೂರಪ್ಪನವರೆ, ಸಮರ್ಪಕ ನೀರು ವಿದ್ಯುತ್ ಪೂರೈಸದಿದ್ದರೂ ದರ ಏರಿಕೆ... ಕಸ ಸಾಗಿಸಲೂ ಸಾಧ್ಯವಾಗದ ಮಹಾನಗರ ಪಾಲಿಕೆ ಆದಾಯ ಹೆಚ್ಚಿಸಲು ಈ ಆಸ್ತಿ ತೆರಿಕೆ ಏರಿಕೆ.
ನಿಮ್ಮ ಮಂತ್ರಿಗಳ ಭತ್ತೆ ಇನ್ನಿತರ ಸೌಲಭ್ಯಗಳನ್ನು ನಿಲ್ಲಿಸಿ ಸ್ವಲ್ಪವಾದರೂ ಆರ್ಥಿಕ ಹೊರ ಕಡಿಮೆ ಮಾಡಿಕೊಳ್ಳಬಹುದಲ್ಲವೆ? ಅದನ್ನು ಬಿಟ್ಟು ಈಗಾಗಲೇ ನಿರುದ್ಯೋಗ,ಬ ಡತನ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವ ಜನಸಾಮಾನ್ಯರ ಮೇಲೆ ಒಂದರ ಮೇಲೊಂದರಂತೆ ತೆರಿಗೆ ಹೇರುತ್ತ ಹೊರಟಿದ್ದೀರಲ್ಲಾ ಇದು ಯಾವ ನ್ಯಾಯ.
ಕೊರೊನಾದಿಂದಾಗಿ ರಾಜ್ಯದ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ರಾಜ್ಯ ಸರಕಾರ ಜನಸಾಮಾನ್ಯರಿಗೆ ಹೊಡೆತ ಕೊಟ್ಟಿದೆ. ಸಿಎಂ ಬಿ.ಎಸ್ .ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ತೀರ್ಮಾನಿಸಿದೆಯಂತೆ.
''ತೆರಿಗೆ ಹೆಚ್ಚಳದಿಂದ ಸ್ಥಳೀಯ ಸಂಸ್ಥೆಗಳಿಗೆ ಆಸ್ತಿ ತೆರಿಗೆ ಆದಾಯ ಹೆಚ್ಚಾಗಲಿದೆ. ಜತೆಗೆ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲಗೊಳ್ಳಲಿವೆ. 2020-21ನೇ ಸಾಲಿಗೆ ಜಿಎಸ್ಡಿಪಿಯ ಶೇ.0.25ರಷ್ಟು ಭಾಗವನ್ನು ಹೆಚ್ಚುವರಿ ಎರವಲಾಗಿ ಕೇಂದ್ರ ಸರಕಾರದಿಂದ ಪಡೆಯಲು ಅನುಕೂಲವಾಗಲಿದೆ,'' ಎಂದು ಸಮರ್ಥಿಸಿಕೊಂಡರು. ವಸತಿ ಹಾಗೂ ವಸತಿಯೇತರ ಕಟ್ಟಡಗಳಿಗೆ ಹಾಲಿ ಶೇ. 0.3ರಿಂದ ಶೇ. 1ರವರೆಗೆ ಆಸ್ತಿ ತೆರಿಗೆ ವಿಧಿಸಲಾಗುತ್ತಿದೆ. ಈ ತೆರಿಗೆಯನ್ನು ಶೇ. 0.2ರಿಂದ ಶೇ. 1.5ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ನಿವೇಶನಗಳಿಗೆ 1000 ಚದರ ಮೀಟರ್ (3 ಸಾವಿರ ಅಡಿ) ತೆರಿಗೆ ವಿನಾಯಿತಿ ನೀಡಲಾಗಿತ್ತು.
ಈಗ ಅದನ್ನು ರದ್ದುಪಡಿಸಿ ನಿವೇಶನಗಳಿಗೆ ಶೇ. 0.2ರಿಂದ ಶೇ. 0.5ರವರೆಗೆ ತೆರಿಗೆ ವಿಧಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಇದುವರೆಗೆ ಕಟ್ಟಡಕ್ಕೆ ಹೊಂದಿಕೊಂಡ ಖಾಲಿ ನಿವೇಶನ ಎಷ್ಟೇ ವಿಸ್ತೀರ್ಣವಿದ್ದರೂ ಅದಕ್ಕೆ ಯಾವುದೇ ತೆರಿಗೆ ವಿಧಿಸುತ್ತಿರಲಿಲ್ಲ. ಇದೀಗ ಕಟ್ಟಡಕ್ಕೆ ಹೊಂದಿಕೊಂಡ ನಿವೇಶನದಲ್ಲಿ 1,000 ಚದರಡಿವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಆದರೆ, 1000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಖಾಲಿ ಜಾಗಕ್ಕೆ ನಿವೇಶನಕ್ಕೆ ವಿಧಿಸುವ ತೆರಿಗೆ ವಿಧಿಸಲಾಗುತ್ತದೆ.
PublicNext
14/01/2021 10:56 am