ಮೈಸೂರು : ‘ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ನವದೆಹಲಿಯ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಕೇವಲ ಪಂಜಾಬಿಗಳು ಮಾತ್ರ ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಕೊಳಕು ರಾಜಕೀಯ ಮಾಡುತ್ತಿವೆ’ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಅವರು ಟೀಕಿಸಿದರು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ವೇಳೆ ‘ದೇಶದಲ್ಲಿ ಒಡೆದು ಛಿದ್ರವಾದ ಸುಮಾರು 35 ಸಾವಿರ ದೇವಾಲಯಗಳನ್ನು ಮರು ನಿರ್ಮಾಣವಾಗಲಿ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಆಗ್ರಹಿಸಿದರು.
ಆ ರೀತಿ ನಿರ್ಮಿಸಿದ ದೇವಾಲಯಗಳನ್ನು ಮೂಲ ವಾರಸುದಾರರಿಗೆ ಒಪ್ಪಿಸುವಂತಹ ಕಾನೂನನ್ನು ಪಾರ್ಲಿಮೆಂಟ್ ರೂಪಿಸಲಿ’ ಎಂದರು.
‘ಹಿಂದೂ ಧರ್ಮದ ದೇವರು ಮತ್ತು ಬೇರೆ ಧರ್ಮದ ದೇವರನ್ನು ಹೋಲಿಸಿದಾಗ ಬೇರೆ ಧರ್ಮದವರ ದೇವರು ಮಹಾ ಕೋಪಿಷ್ಠ ಎಂಬುದು ತಿಳಿಯುತ್ತದೆ.
ಬೇರೆ ಧರ್ಮದ ದೇವರನ್ನು ಒಂದೇ ಒಂದು ಮಾತಿನಿಂದ ಟೀಕೆ ಮಾಡಿದರೆ ನಿಮ್ಮ ಕತೆ ಮುಗಿದಂತೆ.
ಆದರೆ, ನಮ್ಮ ದೇಶದಲ್ಲಿ ನಾವು ದೇವರನ್ನೂ ಟೀಕೆ ಮಾಡುತ್ತೇವೆ. ಅವನು ಮಾಡಿದ್ದು ಸರಿಯೋ, ತಪ್ಪೋ ಎಂದು ಆಲೋಚನೆ ಮಾಡುತ್ತೇವೆ’ ಎಂದು ಅವರು ಹೇಳಿದರು.
PublicNext
04/01/2021 09:39 am