ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓಲಾ ,ಊಬರ್ ಕಷ್ಟ ಕಷ್ಟ-ಬಿಎಂಟಿಸಿನೇ ಈಗ ಬೆಸ್ಟು ಬೆಸ್ಟು !

ಬೆಂಗಳೂರು: ವರ್ಕ್ ಫ್ರಂ ಹೋಮ್ ಮುಗಿದಿದೆ. ಎಲ್ಲರೂ ಆಫೀಸ್‌ಗೆ ಬರ್ತಿದ್ದಾರೆ. ಆದರೆ, ಈಗ ಇವರಿಗೆ ಸಂಚಾರ ಸಮಸ್ಯೆ. ಅದಕ್ಕೇನೆ ಇಲ್ಲೊಬ್ಬ ಉದ್ಯೋಗಿ ಬಿಎಂಟಿಸಿ ಬಸ್‌ ನಲ್ಲಿ ಪ್ರಯಾಣ ಮಾಡಿ ಖುಷ್ ಆಗಿದ್ದಾರೆ. ಆದರೆ, ಆ ಅನುಭವವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ.

ಹೌದು. ಓಲಾ ಮತ್ತು ಊಬರ್ ಬುಕ್ ಮಾಡಲು ಹೆಣಗಾಡಬೇಕು. ಹಾಗೆ ಬುಕ್ ಮಾಡಿದ್ಮೇಲೂ "ಎಲ್ಲಿ ಸಾರ್" ಅನ್ನೋ ಮಾತು ಕೇಳಬೇಕು. ಅದಕ್ಕೂ ಹೆಚ್ಚಾಗಿ ಬಸ್ ದರಕ್ಕಿಂತಲೂ 15 ಪಟ್ಟು ಹೆಚ್ಚು ಕೊಡಬೇಕು,ಹೀಗೆ ಓಲಾ-ಊಬರ್ ಕಾರ್ ಸರ್ವಿಸ್ ಅನ್ನ ತೆಗಳಿದ ಉದ್ಯೋಗಿ ಬಸ್ ಹತ್ತಿ ಖುಷ್ ಆಗಿದ್ದಾರೆ.

ಜನಾಗ್ರಹದಲ್ಲಿ ಕೆಲಸ ಮಾಡೋ ಶ್ರೀನಿವಾಸ್ ಅಲವಲ್ಲಿ ಹೀಗೆ ಬರೆದುಕೊಂಡಿದ್ದಾರೆ. ನಾನು ಹೆಚ್ಚಿನ ಹಣ ಕೊಟ್ಟು ಕ್ಯಾಬ್‌ ನಲ್ಲಿಯೇ ಹೋಗಬೇಕು ಅಂತ ನಿರ್ಧರಿಸಿದೆ. ಆದರೆ, ನನಗೆ ಕ್ಯಾಬ್ ಸಿಗಲೇ ಇಲ್ಲ. ಹಾಗಾಗಿಯೇ ಕೇವಲ 20 ರೂಪಾಯಿ ಕೊಟ್ಟು,ಬಿಎಂಟಿಸಿಯ ಸುಂದರ 13ನೇ ನಂಬರ್ ಬಸ್ ಹತ್ತಿ ಜಯನಗರಕ್ಕೆ ಬಂದೆ. ನಿಜಕ್ಕೂ ಇದು ಖುಷಿ ತಂದಿದೆ ಎಂದಿರೋ ಶ್ರೀನಿವಾಸ್,ಇದೇ ರೀತಿ ಓಲಾ ಮತ್ತು ಊಬರ್ ಸರ್ವಿಸ್ ಕೊಟ್ಟರೇ, ಮುಂದಿನ ಮೂರು ನಾಲ್ಕು ವರ್ಷದಲ್ಲಿ ಇವರೆಡೂ ಇರೋದಿಲ್ಲ ಅಂತಲೇ ಬರೆದುಕೊಂಡಿದ್ದಾರೆ.

Edited By :
PublicNext

PublicNext

14/07/2022 05:47 pm

Cinque Terre

35.46 K

Cinque Terre

0

ಸಂಬಂಧಿತ ಸುದ್ದಿ