ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಲಕ ರಹಿತ ರೈಲಿಗೆ ಪ್ರಧಾನಿಯಿಂದ ಚಾಲನೆ

ನವದೆಹಲಿ: ಚಾಲಕನೇ ಇಲ್ಲದೆ ಚಲಿಸುವ ರೈಲಿಗೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ದೆಹಲಿ ಮೆಟ್ರೊ ರೈಲಿನ ಮೆಜೆಂಟಾ ಮಾರ್ಗದಲ್ಲಿ ದೇಶದ ಮೊಟ್ಟ ಮೊದಲ ಚಾಲಕ ರಹಿತ, ಮೆಟ್ರೊ ರೈಲು ಸೇವೆ ಇಂದಿನಿಂದ ಆರಂಭಗೊಂಡಿದೆ.

High Speed Train,Bullet Train ಈಗ Driverless Train ಸರದಿ. ಆಧುನಿಕ ಜಗತ್ತು ಶರ ವೇಗದಲ್ಲಿ ಬೆಳವಣಿಗೆಯಾಗುತ್ತಿರುವುದಕ್ಕೆ ಇದು ಹಸಿ ಸಾಕ್ಷಿ.

ಚಾಲಕರಹಿತ ರೈಲುಗಳು ಸಂಪೂರ್ಣ ಸ್ವಯಂಚಾಲಿತವಾಗಿರುತ್ತವೆ. ಇದು ಮಾನವ ದೋಷದ ಸಾಧ್ಯತೆಯನ್ನು ನಿವಾರಿಸುತ್ತದೆ ಎಂದು ಸರ್ಕಾರ ಹೇಳಿದೆ.

ನವದೆಹಲಿಯ ಮೆಜೆಂಟಾ ಲೈನ್ (ಜನಕಪುರಿ- ಪಶ್ಚಿಮ ಬಟಾನಿಕಲ್ ಗಾರ್ಡನ್) ನಂತರ 2021ರ ಮಧ್ಯಭಾಗದ ಹೊತ್ತಿಗೆ ದೆಹಲಿಯ ಪಿಂಕ್ ಲೈನ್ (ಮಜ್ಲಿಸ್ ಪಾರ್ಕ್-ಶಿವವಿಹಾರ) ಮಾರ್ಗದಲ್ಲಿ ಚಾಲಕರಹಿತ ಕಾರ್ಯಾಚರಣೆ ನಡೆಸುವ ನಿರೀಕ್ಷೆಯಿದೆ.

ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಸೌಲಭ್ಯ, ದೇಶದ ಯಾವುದೇ ಭಾಗದಲ್ಲಿ ವಿತರಿಸಲಾದ ರುಪೇ-ಡೆಬಿಟ್ ಕಾರ್ಡ್ ಬಳಸಿ ಬಳಸಿಕೊಂಡು ಮಾರ್ಗದಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಈ ಸೌಲಭ್ಯವು 2022 ರ ವೇಳೆಗೆ ದೆಹಲಿಯ ಸಂಪೂರ್ಣ ಮೆಟ್ರೊ ಮಾರ್ಗದಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

28/12/2020 01:48 pm

Cinque Terre

72.29 K

Cinque Terre

1