ಬೆಂಗಳೂರಿನಲ್ಲಿ ಕೆಂಪೇ ಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹೋಗುವುದು ಅಂದರೆ ಅದೊಂದು ದೊಡ್ಡ ಸಾಹಸದ ಕೆಲಸ.ಹೆಬ್ಬಾಳ ಪ್ಲೈ ಓವರ್ ದಾಟಿದ್ರೆ ಏರ್ ಪೋರ್ಟ್ ರೀಚ್ ಆದ ಹಾಗೆನೇ.ಇನ್ನೂ ಮಳೆಗಾಲದಲ್ಲಂತೂ ಕೇಳೋದೆ ಬೇಡೆ ಒಂದೊಂದು ಗಂಟೆ ಟ್ರಾಫಿಕ್ ಮೂ ಆಗೋದೆ ಇಲ್ಲ. ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಹೊಸದಾದ ಯೋಜನೆಯನ್ನು ಬೆಂಗಳೂರಿಗರಿಗೆ ಪರಿಚಯ ಮಾಡಲಾಗುತ್ತಿದೆ, ಅದುವೇ ಪ್ಲೈಯಿಂಗ್ ಟ್ಯಾಕ್ಸಿ. ಪ್ರಯಾಣಿಕರು ಎಲೆಕ್ಟ್ರಾನಿಕ್ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಕೆಲವೇ ನಿಮಿಷಗಳಲ್ಲಿ ಪ್ರಯಾಣಿಸಲು ಈ ಟ್ಯಾಕ್ಸಿ ಅನುವು ಮಾಡಿಕೊಡುತ್ತದೆ.ಇನ್ನೇನು ಮೂರು ವರ್ಷದಲ್ಲಿ ಟ್ಯಾಕ್ಸಿ ತನ್ನ ಸೇವೆ ಆರಂಭಿಸುತ್ತದೆ.
ನಗರದಲ್ಲಿ ಎಲೆಕ್ಟ್ರಿಕ್ ಫ್ಲೈಯಿಂಗ್ ಟ್ಯಾಕ್ಸಿ ಆರಂಭಿಸಲು ಬಿಐಎಎಲ್ ಮತ್ತು ಸರಳಾ ಏವಿಯೇಷನ್ ಪಾಲುದಾರರು ಬೃಹದಾದ ಯೋಜನೆಯನ್ನು ಹಾಕಿದೆ.ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನದ ಕುರಿತು ಹೆಚ್ಚಿನದನ್ನು ಆವಿಷ್ಕರಿಸಲು ಎರಡೂ ಸಂಸ್ಥೆ ಸಹಯೋಗದೊಂದಿಗೆ ಕೆಲಸ ಮಾಡುತ್ತಿದೆ.ಎಲೆಕ್ರ್ಟಾನಿಕ್ ಸಿಟಿಯಿಂದ ಏರ್ ಪೋರ್ಟ್ ರೀಚ್ ಆಗಲು ಈ ಟ್ಯಾಕ್ಸಿ ಜಸ್ಟ್ 19 ನಿಮಿಷ ಪಡೆಯುತ್ತದೆ.ಅದುವೇ ರೋಡ್ ನಲ್ಲಿ ಆದರೆ 152 ನಿಮಿಷ ಬೇಕಾಗುತ್ತದೆ.ಈ ಟ್ಯಾಕ್ಸಿ ಒಬ್ಬ ವ್ಯಕ್ತಿಗೆ 1700 ಚಾರ್ಚ್ ಮಾಡಲಿದೆಯಂತೆ,ಏಳು ಆಸನಗಳ ವ್ಯವಸ್ಥೆಯು ಇರಲಿದೆ.
PublicNext
23/10/2024 07:22 pm