ಹಾಸನ: ಸಿಎಂ ಯಡಿಯೂರಪ್ಪ ಅವರು ವಿರೋಧ ಪಕ್ಷದಲ್ಲಿದ್ದಾಗ ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದ್ರೆ ಈಗ ಅಧಿಕಾರದಲ್ಲಿರುವ ಅವರೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಹಾಗಾದ್ರೆ ವಿರೋಧ ಪಕ್ಷದಲ್ಲಿದ್ದಾಗ ನೀವು ಸರ್ಕಾರಕ್ಕೆ ನಮ್ಮ ಪರವಾಗಿ ಲವ್ ಲೆಟರ್ ಬರೆದಿದ್ರಾ? ಎಂದು ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ಪ್ರಶ್ನೆ ಮಾಡಿದ್ದಾರೆ.
ಇತರ ನಿಗಮಗಳಿಗೆ ಇರುವ ಸೌಲಭ್ಯ ನಮಗೇಕೆ ಇಲ್ಲ? ರಾತ್ರಿ ಪಾಳಿ ಕೆಲಸ ಇದ್ದಾಗ ಮಲಗಲು ಬೇರೆ ವ್ಯವಸ್ಥೆ ಇಲ್ಲದೇ ನೆಲದ ಮೇಲೆ ಮಲಗಿದ್ದೇವೆ. ಕೆಲವೊಮ್ಮೆ ಬಸ್ಸಿನ ಸೀಟ್ ಮೇಲೆ ಮಲಗಿದ್ದೇವೆ. ಲಾಕ್ ಡೌನ್ ಅವಧಿಯಲ್ಲಿ ಸರಿಯಾಗಿ ಸಂಬಳವೇ ಸಿಕ್ಕಿಲ್ಲ. ನಮ್ಮನ್ನೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲೇಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಸಾರಿಗೆ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
PublicNext
12/12/2020 07:49 am