ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಯಲ್ಲಾಪುರ ತಾಲೂಕಿನಾದ್ಯಂತ ಭಾರೀ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ. ಅನೇಕ ಕಡೆ ಕೊಟ್ಟಿಗೆ ಮನೆಗಳಿಗೆ ನೀರು ನುಗ್ಗಿದ್ದು ಕಾಳು ಮೆಣಸು, ಏಲಕ್ಕಿ, ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ತೀವ್ರ ಹಾನಿಯಾಗಿದೆ. ನೀರಿನ ಪಂಪ್‌ಗಳು ನೀರಲ್ಲಿ ತೇಲಿಕೊಂಡು ಹೋಗಿದೆ. ಸಂಗ್ರಹಿಸಿಟ್ಟ ತೆಂಗಿನ ಕಾಯಿಗಳು ನೀರುಪಾಲಾಗಿವೆ.
ಯಲ್ಲಾಪುರ ತಾಲೂಕಿನ ಆನಗೋಡು, ಉಮ್ಮಚ್ಗಿ, ಹಿತ್ತಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇಘಸ್ಪೋಟವಾದಂತೆ ಮಳೆ ಸುರಿದಿದೆ. ಆನಗೋಡಿನ ವೆಂಕಟರಮಣ ಭಟ್ಟರ ಮನೆಯೊಳಗೆ ನೀರು ತುಂಬಿ ಹೊಳೆಯಾಗಿಬಿಟ್ಟಿದೆ. ಈ ಮೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಮೂರು ಕೋಟಿಗೂ ಹೆಚ್ಚು ಕೃಷಿಹಾನಿ ಸಂಭವಿಸಿದ್ದು ರೈತರ ಪರಿಸ್ಥಿತಿ ಶೋಚನೀಯವಾಗಿದೆ.
PublicNext
06/09/2022 11:55 am